ಸಂಗಬೆಟ್ಟು: ಇಸ್ರೇಲ್ ದೇಶವು ಇರಾನ್ ಮೇಲೆ ಯುದ್ದ ಸಾರುವುದರೊಂದಿಗೆ ಬಾಂಬ್ ಹಾಕುತ್ತಿದ್ದರೆ ಇತ್ತ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಕುರ್ಚಿಗೆ ತನ್ನ ಸ್ವಪಕ್ಷೀಯ ಶಾಸಕರು ಬಾಂಬ್ ಇಡುತ್ತಿದ್ದಾರೆ ಎಂದು ಬಿ ಜೆ ಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಗಂಭೀರ ಆರೋಪ ಮಾಡಿದ್ದಾರೆ.
ಅವರು ಇಂದು ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರದ ಜನ ವಿರೋಧಿ ನೀತಿಗಳ ವಿರುದ್ದ ಭಾರತೀಯ ಜನತಾ ಪಾರ್ಟಿ ವತಿಯಿಂದ ಸಂಗಬೆಟ್ಟು ಗ್ರಾಮ ಪಂಚಾಯತ್ ಕಛೇರಿ ಎದುರುಗಡೆ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತಾನಾಡಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಕಳೆದ 2 ವರ್ಷಗಳಿಂದ ಜನರಿಗೆ ಸುಲಭವಾಗಿ ಸಿಗುವ ಸರಕಾರಿ ಸೇವೆಗಳನ್ನು ಇಲ್ಲ ಸಲ್ಲದ ನಿಯಾಮಗಳನ್ನು ಹಾಕುವುದರ ಮೂಲಕ ಕಠಿಣಗೊಳಿತ್ತಿದೆ ಅಲ್ಲದೆ ಪಿಂಚಣಿ ಸಹಿತ ಅನೇಕ ಸವಲತ್ತುಗಳನ್ನು ಹಂತಹಂತವಾಗಿ ಕಠಿಣಗೊಳಿಸುತ್ತಿದೆ. ಸ್ವಪಕ್ಷೀಯ ಶಾಸಕರಾದ ಬಿ.ಆರ್.ಪಾಟೀಲ್ ವಸತಿ ಸಚಿವರ ಮೇಲೆ ಆರೋಪ ಮಾಡುತ್ತಿದ್ದು ಕಾನೂನು ಸಚಿವರಾದ ಎಚ್ ಕೆ ಪಾಟೀಲ್ ಸರಕಾರಕ್ಕೆ 7 ಪುಟಗಳ ಪತ್ರವನ್ನು ಬರೆಯುವುದರ ಮೂಲಕ ಸಿದ್ದರಾಮಯ್ಯನವರ ಸರಕಾರಕ್ಕೆ ಚಾಟಿ ಬಿಸೂತ್ತಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲಿಯೂ ಅಲ್ಪಸಂಖ್ಯಾತ ಮುಸ್ಲಿಂರಿಗೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತಿರುವ ಸಿದ್ದರಾಮಯ್ಯ ಸರಕಾರ ಔರಂಗಜೇಬನ ಸರಕಾರದ ಹಾದಿಯಲ್ಲಿ ಸಾಗುತ್ತಿದೆ ಎಂದೂ ಹರಿಕೃಷ್ಣ ಆರೋಪಿಸಿದರು.

ಪ್ರತಿಭಟನಾ ಸಭೆಯಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೀವಿ ಪೂಜಾರ್ತಿ , ಉಪಾಧ್ಯಕ್ಷ ಸುರೇಶ್ ಕುಲಾಲ್, ಸದಸ್ಯರಾದ ಸಂದೇಶ್ ಶೆಟ್ಟಿ ಪೋಡುಂಬ,ಸುನೀಲ್ ಶೆಟ್ಟಿಗಾರ್ , ಉದಯ ಪೂಜಾರಿ , ಶಕುಂತಲಾ , ಪ್ರೇಮ , ವಿದ್ಯಾ ಪ್ರಭು , ಶಾಂತ , ಸಿದ್ದಕಟ್ಟೆ ಸಿ .ಎ ಬ್ಯಾಂಕ್ ನಿರ್ದೇಶಕರಾದ ವಿಶ್ವನಾಥ ಶೆಟ್ಟಿಗಾರ್ , ಶಕ್ತಿ ಕೇಂದ್ರದ ಪ್ರಮುಖ್ ನವೀನ್ ಹೆಗ್ಡೆ , ಬಿ ಜೆ ಪಿ ಪ್ರಮುಖರಾದ ದೀಪಕ್ ಶೆಟ್ಟಿಗಾರ್ , ಉಮೇಶ್ ಗೌಡ , ಸುಂದರ ಪೂಜಾರಿ , ಭಾಸ್ಕರ ಪ್ರಭು , ಸದಾನಂದ ಪೂಜಾರಿ ಕರ್ಪೆ ,ದೇವರಾಜ್ ಸಾಲಿಯಾನ್, ಮಾಧವ ಶೆಟ್ಟಿಗಾರ್ , ವಿನೋದ್ ಅಡಪ, ಭೋಜ ಶೆಟ್ಟಿಗಾರ್,, ಗಣೇಶ ಮೇಲುಗುಡ್ಡೆ , ದಾಮೋದರ ಪೂಜಾರಿ , ರಾಜೇಶ್ ಶೆಟ್ಟಿ ಮತ್ತಿತ್ತರು ಉಪಸ್ಥಿತರಿದ್ದರು .
ಪ್ರಭಾಕರ ಪ್ರಭು ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು . ಸಂದೇಶ್ ಶೆಟ್ಟಿ ಧನ್ಯವಾದವಿತ್ತರು .
