ಬಂಟ್ವಾಳ : ದಿನಾಂಕ 23 ಸೋಮವಾರ ಬೆಳಗ್ಗೆ ಗಂಟೆ 10 ಸರಿಯಾಗಿ ಫಿಲಾತಬೆಟ್ಟು ಗ್ರಾಮ ಪಂಚಾಯತ್ ವಠಾರದಲ್ಲಿ, ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಗ್ರಾಮಸ್ಥರ ಒಟ್ಟುಗೂಡಿಕೆಯಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು.



ದ.ಕ.ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ. ತುಂಗಪ್ಪ ಬಂಗೇರ ಮಾತನಾಡಿ, ಜನರಿಗೆ ಮೋಸ ಮಾಡಿದ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಒಗ್ಗಟ್ಟಾಗಿ ಹೋರಾಟ ಮಾಡಿ ರಾಜ್ಯಪಾಲರಿಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳನ್ನು ಭೃಷ್ಟ ಸಚಿವರನ್ನು ವಜಾ ಮಾಡುವಂತೆ ಆಗ್ರಹಿಸಿದರು. ಬಿಜೆಪಿ ಮುಖಂಡರಾದ ಪ್ರಭಾಕರ ಪ್ರಭು ಸಿದ್ದಕಟ್ಟೆ ಮಾತನಾಡಿ, ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಮೇಲೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳು, ಅಸಂಪ್ರದಾಯಿಕ ನೀತಿಗಳು, ಧರ್ಮವಿರೋಧಿ ಕೃತ್ಯಗಳು, ರಾಜಕಾರಣದ ಅಪಮೌಲ್ಯಗಳ ಕುರಿತು ವಿವರಿಸಿದರು.

ಪ್ರತಿಭಟನಾ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಾರದಾ, ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಮಂಡಲ ಕ್ಷೇತ್ರ ಕಾರ್ಯದರ್ಶಿ ಶ್ರೀಮತಿ ಹರ್ಷಿಣಿ ಪುಷ್ಪಾನಂದ
ಉಪಾಧ್ಯಕ್ಷರಾದ ಯೋಗೇಂದ್ರ ಕುಮಂಗಿಲ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಜೆ. ಬಂಗೇರ, ಚಂದ್ರಶೇಖರ್ ಶೆಟ್ಟಿ ಕುಮಂಗಿಲ, ಲಕ್ಷ್ಮೀನಾರಾಯಣ ಹೆಗಡೆ ಸದಸ್ಯರಾದ ಕಾಂತಪ್ಪ ಕರ್ಕೇರ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರು ಸದಸ್ಯರುಗಳು ಹಾಗೂ ಅಸಂಖ್ಯಾತ ನಾಗರಿಕರ ಉಪಸ್ಥಿತಿಯಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಯವರಲ್ಲಿ ರಾಜ್ಯಪಾಲರ ಸನ್ನಿಧಾನಕ್ಕೆ ತಲುಪುವಂತೆ ಬೇಡಿಕೆಯೊಂದಿಗೆ, ಮನವಿಯನ್ನು ಸಲ್ಲಿಸಲಾಯಿತು.

