ಪುತ್ತೂರಿನ ಕನ್ನಡದ ಕಟ್ಟಾಳು ಸೀತಾರಾಮ ರೈ ಬನ್ನೂರು ನಿಧನ

ಪುತ್ತೂರು: ಪುತ್ತೂರಿನ ಕನ್ನಡದ ಕಟ್ಟಾಳು ಎಂದೇ ಪ್ರಸಿದ್ದರಾಗಿದ್ದ ಬನ್ನೂರು ನಿವಾಸಿ ಸೀತಾರಾಮ ರೈ ಬನ್ನೂರು(76ವ)ರವರು ಜು.15 ರಂದು ನಿಧನರಾದರು.

ಪುತ್ತೂರಿನಲ್ಲಿ ಕನ್ನಡ ರಾಜ್ಯೋತ್ಸವ ಸಹಿತ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿ ಭಾಗವಹಿಸುತ್ತಿದ್ದ ಸೀತಾರಾಮ ರೈ ಬನ್ನೂರು ಅವರು ಹೃದಯಾಘಾತಕ್ಕೊಳಗಾಗಿ ಹಲವು ದಿನಗಳ ಹಿಂದೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.

ಮೃತರು ಪುತ್ರಿ ರೋಜಾ, ಪುತ್ರರಾದ ಬ್ಲಾಕ್ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರೋಶನ್ ರೈ ಬನ್ನೂರು, ಜ್ಯೂಸ್ ಸೆಂಟರ್‌ನ ಮಾಲಕ ರೋಹಿತ್ ರೈ, ಇಬ್ಬರು ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *