Breaking
19 Sep 2026, Sat

ಹೃದಯಾಘಾತದಿಂದ ರಂಗಭೂಮಿ ಕಲಾವಿದ ಮೌನೇಶ್ ಆಚಾರ್ಯ ಮಾಣಿ ನಿಧನ

ಬಂಟ್ವಾಳ: ರಂಗಭೂಮಿ ಕಲಾವಿದ, ಮೌನೇಶ್ ಆಚಾರ್ಯ ಮಾಣಿ(42) ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಹಾಸ್ಯ ನಟನೆಯ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಖ್ಯಾತಿ ಪಡೆದಿದ್ದರು. ನೆಲ್ಯಾಡಿಯ ‘ನಮ್ಮ ಕಲಾವಿದರು’ ತಂಡದಲ್ಲೂ ಕಲಾವಿದನಾಗಿ, ಹಾಸ್ಯ ನಟನಾಗಿ, ಪೋಷಕ ಪಾತ್ರದಲ್ಲಿ ಗುರುತಿಸಿಕೊಂಡಿದ್ದರು.

ಇವರು ಪತ್ನಿ, ಮಗು, ತಾಯಿ ಹಾಗೂ ತಮ್ಮನನ್ನು ಅಗಲಿದ್ದು, ನಗು ಮೊಗದ ಕಲಾವಿದನ ಸಾವಿಗೆ ಹಲವಾರು ಕಲಾವಿದರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *