Breaking
12 May 2026, Tue

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶ್ರೀ ಬಡಗಬೆಳ್ಳೂರು ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಜೀರ್ಣೋದ್ಧಾರಕ್ಕೆ‌ ಸಹಾಯಧನ ಮಂಜೂರಾತಿ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಬಡಗಬೆಳ್ಳೂರು ಜೀರ್ಣೋದ್ಧಾರಕ್ಕೆ‌ ಕ್ಷೇತ್ರದಿಂದ ಪೂಜ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರಾತಿ ಮಾಡಿದ 3,00,000(ಮೂರು ಲಕ್ಷ) ಡಿ.ಡಿ.ಹಸ್ತಾಂತರವನ್ನು ಯೋಜನೆಯ ದ.ಕ ಜಿಲ್ಲಾ ನಿರ್ದೇಶಕರಾದ ದಿನೇಶ್ ಮತ್ತು ತಾಲೂಕಿನ ಯೋಜನಾಧಿಕಾರಿಯವರಾದ ಜಯಾನಂದ.ಪಿ ರವರು ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ ವಸಂತರವರಿಗೆ ಹಸ್ತಾಂತರ ಮಾಡಿದರು.

ಈ‌ ಸಂದರ್ಭದಲ್ಲಿ ಪೊಳಲಿ ವಲಯದ ಮೇಲ್ವಿಚಾರಕರಾದ ರೂಪ.ರೈ , ಜನಜಾಗೃತಿ ವೇದಿಕೆಯ ಸದಸ್ಯರಾದ ಗಂಗಾಧರ .ರೈ ಮತ್ತು ಮಂಜುಳಾ ಶೆಟ್ಟಿ ಮತ್ತು ತೆಂಕಬೆಳ್ಳೂರು‌ ಒಕ್ಕೂಟದ ಸೇವಾಪ್ರತಿನಿಧಿ‌ಮತ್ತು‌ ಬಡಗಬೆಳ್ಳೂರು ಗ್ರಾಮಪಂಚಾಯತ್ ಅಧ್ಯಕ್ಷರಾದ ರೂಪಶ್ರೀ , ಮತ್ತು ದೇವಸ್ಥಾನದ ಕಮಿಟಿಯ ಸದಸ್ಯರು, ಒಕ್ಕೂಟದ ಅಧ್ಯಕ್ಷರು ಮತ್ತು ಗ್ರಾಮಪಂಚಾಯತ್ ಸದಸ್ಯರು, ಮತ್ತು ಬಡಗಬೆಳ್ಳೂರು ಒಕ್ಕೂಟದ ಸರಿತಾ, ಧನೂಪೂಜೆ ಒಕ್ಕೂಟದ ಅಮಿತಾ.ಬಿ ‌ಮತ್ತು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *