Breaking
14 Jul 2026, Tue

ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ನಲ್ಲಿ “ಆಟಿದ ಕೂಟ” ಕಾರ್ಯಕ್ರಮ

ಬಂಟ್ವಾಳ: ತಾಲೂಕಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ‘ಆಟಿದ ಕೂಟ’ ಕಾರ್ಯಕ್ರಮವು ಜುಲೈ 30 ರಂದು ನಡೆಯಿತು.ಈ ವೇಳೆ ಮಾತಾನಾಡಿದ ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಅವರು ತುಳುನಾಡಿನ ಕೃಷಿಕರು ಆಟಿ ತಿಂಗಳ ಮಳೆಯ ನಡುವೆ ಆಹಾರ ಕೊರತೆ ನಿವಾರಿಸಲು ಕಂಡುಕೊಂಡ ಕಾಡಿನ ಗೆಡ್ಡೆ ಗೆಣಸು ಸೇರಿದಂತೆ ವಿವಿಧ ಸೊಪ್ಪು ಮತ್ತು ಹಣ್ಣು ಹಂಪಲು ಸೇವನೆ ಮತ್ತಿತರ ಆಹಾರ ಪದ್ಧತಿಯು ವೈಜ್ಞಾನಿಕವಾಗಿಯೂ ಆರೋಗ್ಯಪೂರ್ಣವಾಗಿದೆ ಎಂದರು.

ಇಲ್ಲಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಬುಧವಾರ ಸಂಜೆ ನಡೆದ ‘ಆಟಿದ ಕೂಟ’ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ರೋಟರಿ ಸಹಾಯಕ ಗವರ್ನರ್ ಉಮೇಶ್ ರಾವ್ ಮಿಜಾರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ಲಬ್ ನ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಮಾಜಿ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಶುಭ ಹಾರೈಸಿದರು.

ಇದೇ ವೇಳೆ ನೂತನ ಸದಸ್ಯರಾಗಿ ಕ್ಲಾರೆಟ್ ಡಿಸೋಜ ಇವರು ಕ್ಲಬ್ ಗೆ ಸೇರ್ಪಡೆಗೊಂಡರು. ಕ್ಲಬ್ ನ ಸದಸ್ಯ ಉಜಿರೆ ಪ್ರವೀಣ್ ಹಳ್ಳಿಮನೆ ಇವರು ತುಳುನಾಡಿನ ಕೃಷಿ ಪರಿಕರಗಳನ್ನು ಪ್ರದರ್ಶಿಸಿದರು. ಕ್ಲಬ್ ನ ಮಾಜಿ ಅಧ್ಯಕ್ಷರಾದ ಸುರೇಶ ಶೆಟ್ಟಿ ಸಿದ್ಧಕಟ್ಟೆ, ಆಂಟೊನಿ ಸಿಕ್ವೇರ, ರಾಘವೇಂದ್ರ ಬಲ್ಲಾಳ್, ಶ್ರುತಿ ಮಾಡ್ತಾ ಮತ್ತಿತರರು ಉಪಸ್ಥಿತರಿದ್ದರು.

ಕ್ಲಬ್ ನ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು. ಸದಸ್ಯರಾದ ನೆಲ್ಸನ್ ಮೋನಿಸ್ ಮತ್ತು ಕೆ.ರಮೇಶ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *