ಬಂಟ್ವಾಳ: ತಾಲೂಕಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಸಿದ್ಧಕಟ್ಟೆ ಮಂಚಕಲ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಹಣ್ಣಿನ ಗಿಡಗಳನ್ನು ಜುಲೈ 30 ರಂದು ನೆಡಲಾಯಿತು.
ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಸದಸ್ಯರಾದ ಸೆಬೆಸ್ಟಿನ್ ಮಿನೇಜಸ್, ರಾಜೇಶ ಶೆಟ್ಟಿ ಕೊನೆರೊಟ್ಟು, ಶಶಿಧರ ಶೆಟ್ಟಿ ಕಲ್ಲಾಪು, ಮುಖ್ಯಶಿಕ್ಷಕಿ ವಿನಿತಾ ಮತ್ತಿತರರು ಉಪಸ್ಥಿತರಿದ್ದರು.




