ಮಂಗಳೂರು: ತಾಲೂಕಿನ ಮೂಡುಪೆರಾರ ಗ್ರಾಮದ ಮಿತ್ತಕೊಳಪಿಲದ ಶ್ರೀ ರಾಘವೇಂದ್ರ ಯುವಕ ಮಂಡಲದ 2026–28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಇತ್ತೀಚೆಗೆ ಸಂಘದ ಆವರಣದಲ್ಲಿ ನಡೆಯಿತು.

ಸಭೆಯಲ್ಲಿ ಮಂಡಳಿಯ ನೂತನ ಅಧ್ಯಕ್ಷರಾಗಿ ದುರ್ಗಾಪ್ರಸಾದ್ ಶೆಟ್ಟಿ ಕೊಳಪಿಲ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ದೇವಪ್ಪ ಶೆಟ್ಟಿ ಕೊಕ್ಕಾರು, ಗೌರವ ಸಲಹೆಗಾರರಾಗಿ ಹರೀಶ್ ಕೊಡೆತ್ತೂರು, ಸಹ ಗೌರವ ಸಲಹೆಗಾರರಾಗಿ ನವೀನ್ ಆಳ್ವ ಕತ್ತಲ್ಸಾರ್, ರಾಜೇಶ್ ಶೆಟ್ಟಿ ಪೂವತೋಟ ಹಾಗೂ ಶಿವಚರಣ್ ರೈ ಮುಂಡಬೆಟ್ಟುಗುತ್ತು ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಭಾಸ್ಕರ ಮಿತ್ತಕೊಳಪಿಲ, ಪ್ರವೀಣ್ ಶೆಟ್ಟಿ ಕೊಕ್ಕಾರು, ಕೃಷ್ಣ ಕುಂದರ್ ಕೊಳಪಿಲ ಹಾಗೂ ಚಂದ್ರಹಾಸ ಪೂಜಾರಿ ಬೋರುಗುಡ್ಡೆ, ಕಾರ್ಯದರ್ಶಿಯಾಗಿ ದುರ್ಗೇಶ್ ದೇವಸ, ಜತೆ ಕಾರ್ಯದರ್ಶಿಗಳಾಗಿ ಸಂದೀಪ್ ಮಿತ್ತಕೊಳಪಿಲ ಹಾಗೂ ರವೀಂದ್ರ ಪೂಜಾರಿ ಬಾಲ್ಕೋಡಿ ಆಯ್ಕೆಯಾದರು.

ಕೋಶಾಧಿಕಾರಿಯಾಗಿ ನಾರಾಯಣ ಗೌಡ ಮಿತ್ತಕೊಳಪಿಲ, ಜತೆ ಕೋಶಾಧಿಕಾರಿಗಳಾಗಿ ಜಾನಪ್ಪ ಗೌಡ ಮಿತ್ತಕೊಳಪಿಲ ಹಾಗೂ ಯಶೋಧರ ಪೂಜಾರಿ ಮಿತ್ತಕೊಳಪಿಲ, ಸಂಘಟನಾ ಕಾರ್ಯದರ್ಶಿಗಳಾಗಿ ಸುಧಾಕರ ಮಿತ್ತಕೊಳಪಿಲ, ಸಂತೋಷ್ ಪೂಜಾರಿ ಕುರುಂಬಿಲ್ ಹಾಗೂ ಗುರುಪ್ರಸಾದ್ ಶೆಟ್ಟಿ ಕೊಳಪಿಲ ಆಯ್ಕೆಯಾಗಿದ್ದಾರೆ.







