Breaking
8 Sep 2026, Tue

ವಗ್ಗದ ಗೋಕುಲೋತ್ಸವದಲ್ಲಿ ಬಾಲಕೃಷ್ಣರ ಕಲರವ; ಕೃಷ್ಣವೇಷ ಸ್ಪರ್ಧೆ ಆಕರ್ಷಣೆ

ವಗ್ಗ: ಬಂಟ್ವಾಳ ತಾಲ್ಲೂಕಿನ ವಗ್ಗ ಕಾಡಬೆಟ್ಟು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಬಾಲಗೋಕುಲ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಭಾನುವಾರ ಗೋಕುಲೋತ್ಸವ ಸಂಭ್ರಮದಿಂದ ನಡೆಯಿತು.


ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ಮಕ್ಕಳು ವಿವಿಧ ರೀತಿಯಲ್ಲಿ ಕೃಷ್ಣನ ವೇಷ ಧರಿಸಿ ಪಾಲ್ಗೊಂಡು ಗಮನ ಸೆಳೆದರು. ಬಾಲಕೃಷ್ಣರ ವೈವಿಧ್ಯಮಯ ವೇಷಭೂಷಣಗಳು ಹಾಗೂ ಮುದ್ದಾದ ಅಭಿನಯ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.

Leave a Reply

Your email address will not be published. Required fields are marked *