Breaking
24 Jul 2026, Fri

ವಿಟ್ಲ: ನೀಟ್ ಪ್ರತಿಭಟನೆ ಕುರಿತು ಅವಹೇಳನಕಾರಿ ಪೋಸ್ಟ್‌: ವಿಟ್ಲ ಪೊಲೀಸರಿಂದ ಯುವಕನ ಬಂಧನ

ಬಂಟ್ವಾಳ: ನೀಟ್ ಪ್ರತಿಭಟನೆಗೆ ಸಂಬಂಧಿಸಿದಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಹಾಗೂ ಕೋಮು ಸೌಹಾರ್ದ ಕದಡುವ ಆರೋಪದಡಿ ಬಂಟ್ವಾಳ ತಾಲೂಕಿನ ಕೇಪು ನಿವಾಸಿ ಭರತ್ ನನ್ನು (36) ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ದೂರುದಾರರ ಪ್ರಕಾರ, ತಾವು ಸದಸ್ಯರಾಗಿರುವ ವಾಟ್ಸಾಪ್‌ ಗುಂಪಿನಲ್ಲಿ ಜುಲೈ 23ರಂದು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿಯನ್ನು ಭಂಗಗೊಳಿಸುವಂತಹ ಸಂದೇಶದ ಸ್ಕ್ರೀನ್‌ಶಾಟ್‌ ಹರಿದಾಡುತ್ತಿತ್ತು. ಪರಿಶೀಲಿಸಿದಾಗ, ಅದೇ ಸಂದೇಶವನ್ನು ಭರತ್ ತನ್ನ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಪ್ರಕಟಿಸಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆಯ ಬಳಿಕ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *