ಚಿಕ್ಕಬಳ್ಳಾಪುರ: ಎರಡನೇ ಮಗುವೂ ಹೆಣ್ಣು ಜನಿಸಿದೆ ಎಂಬ ಕಾರಣಕ್ಕೆ 13 ದಿನದ ಹೆಣ್ಣು ಶಿಶುವನ್ನು ತಂದೆಯೇ ಸಂಪ್‌ಗೆ ಎಸೆದು ಹತ್ಯೆ ಮಾಡಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ನಗರದ ನಕ್ಕಲಕುಂಟೆ ಪ್ರದೇಶದಲ್ಲಿ ನಡೆದಿದೆ.

ಈ ಪ್ರಕರಣದಲ್ಲಿ ನಕ್ಕಲಕುಂಟೆ ನಿವಾಸಿ ಇಮ್ರಾನ್ ಎಂಬಾತನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಇಮ್ರಾನ್ ಹಾಗೂ ಮುಸ್ಕೀನ್ ದಂಪತಿಗೆ ಮೊದಲ ಮಗುವೂ ಹೆಣ್ಣು ಆಗಿದ್ದು, ಎರಡನೇ ಮಗುವೂ ಹೆಣ್ಣಾಗಿದ್ದರಿಂದ ಆರೋಪಿ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.

ಆರೋಪಿ ಜುಲೈ 22ರ ಬುಧವಾರ ತಡರಾತ್ರಿ ಮನೆಯವರು ಮಲಗಿದ್ದ ವೇಳೆ 13 ದಿನದ ಶಿಶುವನ್ನು ಸಂಪ್‌ಗೆ ಎಸೆದು ಹತ್ಯೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.








