ಮೂಡುಬಿದಿರೆಯ ಧವಳ ಕಾಲೇಜಿನಲ್ಲಿ ಎಸ್.ಎಂ.ಡಿ.ಜೆ.ವಿ. ಸಂಘದ ಆಡಳಿತದಲ್ಲಿ ನಡೆದ 2025–26ನೇ ಶೈಕ್ಷಣಿಕ ವರ್ಷದ ಬಿ.ಸಿ.ಎ. ಆರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಕಳಸಬೈಲು ಗ್ರಾಮದ ಕು. ಅನನ್ಯಾ ಅವರು 650 ಅಂಕಗಳಲ್ಲಿ 625 (96.15%) ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಕಳಸಬೈಲಿನ ಶ್ರೀಮತಿ ಸುಮತಿ ನಾಯ್ಕ್ ಹಾಗೂ ಶ್ರೀ ಹರೀಶ್ ನಾಯ್ಕ್ ದಂಪತಿಯ ಪುತ್ರಿಯಾಗಿರುವ ಅನನ್ಯಾ ಅವರು ಸರಳ ಕುಟುಂಬದ ಹಿನ್ನೆಲೆಯಿಂದ ಬಂದು ತಮ್ಮ ಪರಿಶ್ರಮ, ಶಿಸ್ತು ಹಾಗೂ ನಿರಂತರ ಅಭ್ಯಾಸದ ಮೂಲಕ ಈ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ.

ಶೈಕ್ಷಣಿಕ ಸಾಧನೆಯ ಜೊತೆಗೆ, ಮಹಮ್ಮಾಯಿ ಭಜನಾ ಮಂಡಳಿ, ಕಳಸಬೈಲು ಇದರ ಸದಸ್ಯೆಯಾಗಿ ಹಲವು ವರ್ಷಗಳಿಂದ ಭಜನಾ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ.
ಅನನ್ಯಾ ಅವರ ಈ ಸಾಧನೆಗೆ ಭಜನಾ ಗುರುಗಳಾದ ಅಶೋಕ್ ನಾಯ್ಕ್ ಕಳಸಬೈಲು ಇವರು ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ.








