Breaking
24 Jul 2026, Fri

ಬಂಟ್ವಾಳ: ಅಗ್ರಾರ್ ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘ ಸಭೆ

ಬಂಟ್ವಾಳ: ತಾಲೂಕಿನ ಅಗ್ರಾರ್ ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ ಜುಲೈ 21ರ ಮಂಗಳವಾರ ನಡೆಯಿತು. ಸಭೆಯಲ್ಲಿ ನೂತನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಪ್ರಿನೀತ್ ರಾಡ್ರಿಗಸ್ ಆಯ್ಕೆಯಾದರು.

ಶಿಕ್ಷಕ-ರಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷೆ ಶರಲ್ ನೊರೋನ್ಹ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಧರ್ಮಗುರು ಎಡ್ವರ್ಡ್ ರಾಡ್ರಿಗಸ್ ಎಸ್.ಜೆ. ಮಾತನಾಡಿ, ಪೋಷಕರು ಮತ್ತು ಶಿಕ್ಷಕರ ಸಮನ್ವಯದ ಮಹತ್ವದ ಕುರಿತು ಮಾಹಿತಿ ನೀಡಿದರು.

ಶಾಲಾ ಸಂಚಾಲಕ ಧರ್ಮಗುರು ಡಾ. ಪೀಟರ್ ಡಿಸೋಜ ಹಾಗೂ ಪಾಲನಾ ಮಂಡಳಿ ಉಪಾಧ್ಯಕ್ಷ ಓಡ್ರಿನ್ ಡಿಸೋಜ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 617 ಅಂಕ ಗಳಿಸಿ ರಾಜ್ಯದಲ್ಲಿ 9ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಲೀಶಾ ಲೋಬೋ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಶಿಕ್ಷಕಿ ಭಗಿನಿ ಪ್ರಶಾಂತಿ ಮೋನಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕಿ ವಿನಿತ ಡಿಸಿಲ್ವಾ ವರದಿ ವಾಚಿಸಿದರು. ಸುಜಾತ ಸ್ವಾಗತಿಸಿ, ಸುನಿತಾ ಬ್ಯಾಪ್ಟಿಸ್ಟ್ ವಂದಿಸಿದರು. ಯಶೋಧ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *