ಮೂಡುಬಿದ್ರೆ: ನಮ್ಮ ಜವನೆರ್ ಮಂಜನಕಟ್ಟೆ, ಬೆಳುವಾಯಿ ಇವರ ವತಿಯಿಂದ 13ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಂಜನಕಟ್ಟೆ ಪ್ರೀಮಿಯರ್ ಲೀಗ್ (MPL) – 2026 ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಬೆಳುವಾಯಿ ಮಂಜನಕಟ್ಟೆಯಲ್ಲಿ ಡಿಸೆಂಬರ್ 27ರಂದು ಕ್ರೀಡಾಕೂಟ ನಡೆಯಲಿದೆ. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಪ್ರತಿಭಾವಂತ ತಂಡಗಳ ಜೊತೆಗೆ ಇತರ ಪ್ರದೇಶಗಳ ತಂಡಗಳೂ ಭಾಗವಹಿಸಲಿವೆ.

ಕ್ರೀಡಾಕೂಟದ ಅಂಗವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ₹15,000 ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನವಾಗಿ ₹10,000 ಹಾಗೂ ಶಾಶ್ವತ ಫಲಕ, ತೃತೀಯ ಬಹುಮಾನವಾಗಿ ₹7,000 ಹಾಗೂ ಶಾಶ್ವತ ಫಲಕ ಮತ್ತು ಚತುರ್ಥ ಬಹುಮಾನವಾಗಿ ₹5,000 ಹಾಗೂ ಶಾಶ್ವತ ಫಲಕ ನೀಡಲಾಗುವುದು.

ಮಹಿಳೆಯರ ವಿಭಾಗದಲ್ಲಿಯೂ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು, ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಶಾಶ್ವತ ಫಲಕಗಳನ್ನು ನೀಡಲಾಗುವುದು.



