Breaking
8 Sep 2026, Tue

ಸಮಾಜದ ಪ್ರತಿಯೊಬ್ಬರಿಗೂ ಯಾವುದೇ ತಾರತಮ್ಯವಿಲ್ಲದೆ ಆರೋಗ್ಯ ಪೂರ್ಣ ಸೇವೆ ಸಲ್ಲಿಸುವುದರಿಂದ ವೈದ್ಯರ ಬದುಕು ಸಾರ್ಥಕ: ರೋ. ಡಾ. ಸುದೀಪ್ ಕುಮಾರ್

ಬಂಟ್ವಾಳ: ಸಮಾಜದ ಪ್ರತಿಯೊಬ್ಬರಿಗೂ ಯಾವುದೇ ತಾರತಮ್ಯವಿಲ್ಲದೆ ಆರೋಗ್ಯ ಪೂರ್ಣ ಸೇವೆ ಸಲ್ಲಿಸುವುದರ ಮೂಲಕ ವೈದ್ಯರು ತಮ್ಮ ಬದುಕಿನಲ್ಲಿ ಸಾರ್ಥಕತೆ ಕಾಣುತ್ತಿರುವುದು ವೈದ್ಯ ವೃತ್ತಿಯಿಂದ ಸಾಧ್ಯವಾಗಿದೆ ಎಂದು ಸಿದ್ದಕಟ್ಟೆಯ ಅನಂತ ಪದ್ಮನಾಭ ಹೆಲ್ತ್ ಸೆಂಟರ್‌ನ ವೈದ್ಯ ಡಾ. ಸುದೀಪ್ ಕುಮಾರ್ ಅಭಿಪ್ರಾಯಪಟ್ಟರು.

ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಬಂಟ್ವಾಳ ಆಯೋಜಿಸಿದ್ದ ಗೌರವ ಸಮಾರಂಭದಲ್ಲಿ ಗೌರವರ್ಪಣೆ ಸ್ವೀಕರಿಸಿ ಸಿದ್ದಕಟ್ಟೆ ಅನಂತ ಪದ್ಮನಾಭ ಹೆಲ್ತ್ ಸೆಂಟರ್ ಸುದೀಪ್ ಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ರೋಟರಿ ಕ್ಲಬ್ ಮೂಲಕ ಇನ್ನು 10 ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೋಟರಿ ಜಿಲ್ಲೆಯಲ್ಲಿ ಮಾದರಿ ಕ್ಲಬ್ ಆಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.

ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಅಧ್ಯಕ್ಷೆ ರೋ. ಗೀತಾ ಬಲ್ಲಾಳ್ ಮಾತನಾಡಿ, ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ವೈದ್ಯರನ್ನು ಗೌರವಿಸುವ ಅವಕಾಶ ದೊರೆತಿರುವುದು ಸಂತಸದ ಸಂಗತಿ. ವೈದ್ಯರ ಸೇವೆಗೆ ಸಮಾಜ ಸದಾ ಚಿರಋಣಿಯಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರಾದ ರಾಜೇಶ್ ಶೆಟ್ಟಿ ರಾಯಿ ಶೀತಲಾ, ಸುಮಿತ್ರಾ ರಾಮಚಂದ್ರ ಶೆಟ್ಟಿಗಾರ್, ಪ್ರಭಾಕರ ಪ್ರಭು ಹಾಗೂ ರಾಜೇಶ್ ಶೆಟ್ಟಿ ಕೊನೆರಬೆಟ್ಟು ಉಪಸ್ಥಿತರಿದ್ದರು. ರೋ. ರಮೇಶ್ ನಾಯಕ್ ರಾಯಿ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *