ಬೆಳಾಲು: ಮೈತ್ರಿ ಯುವಕ ಮಂಡಲ (ರಿ.) ಬೆಳಾಲು ಇದರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭವು ಸೆ. 6ರಂದು ಯುವಕ ಮಂಡಲದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶ್ರೀಮತಿ ಡೈನಾ ಪ್ರವೀಣ್ ವಿಜಯ್ ಪಾರಳ ಅವರು ಬೆಳಾಲು ಗ್ರಾಮದ ಕಡುಬಡತನದಲ್ಲಿರುವ ಇಬ್ಬರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ತಮ್ಮ ವೈಯಕ್ತಿಕ ನೆಲೆಯಲ್ಲಿ ಪ್ರೋತ್ಸಾಹ ಧನ ಸಹಾಯವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಎಸ್‌ಕೆಡಿಆರ್‌ಡಿಪಿ ಬಜಪೆ ವಲಯದ ಯೋಜನಾಧಿಕಾರಿ ಗಿರೀಶ್ ಎಂ., ಜುಬೈರ್ ಅನಂತೋಡಿ, ಮೈತ್ರಿ ಯುವಕ ಮಂಡಲದ ಅಧ್ಯಕ್ಷ ನವನೀತ್ ಗೌಡ, ಗೌರವ ಸಲಹೆಗಾರ ಹಾಗೂ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಜತ್ತನ್ನ ಗೌಡ, ಗೌರವಾಧ್ಯಕ್ಷ ನಿತಿನ್ ಮೋನಿಸ್ ಹಾಗೂ ಕಾರ್ಯದರ್ಶಿ ಕಿರಣ್ ಸುವರ್ಣ ಉಪಸ್ಥಿತರಿದ್ದರು.






