ಬೆಳಾಲು: ಮೈತ್ರಿ ಯುವಕ ಮಂಡಲ (ರಿ.), ಬೆಳಾಲು ಇದರ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸೆ. 6ರಂದು ಯುವಕ ಮಂಡಲದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್‌ಕೆಡಿಆರ್‌ಡಿಪಿ ಬಜಪೆ ವಲಯ ಯೋಜನಾಧಿಕಾರಿ ಗಿರೀಶ್ ಎಂ. ಧಾರ್ಮಿಕ ಭಾಷಣ ಮಾಡಿದರು. ಜುಬೈರ್ ಅನಂತೋಡಿ ಬೆಳಾಲು ಹಾಗೂ ಡೈನಾ ಪ್ರವೀಣ್ ಪಾರಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೈತ್ರಿ ಯುವಕ ಮಂಡಲದ ಅಧ್ಯಕ್ಷ ನವನೀತ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬಾಬು ಆಚಾರ್ಯ (ನಾಟಿ ವೈದ್ಯ), ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಶಿಧರ ಆಚಾರ್ಯ (ಮಾಯಾ ಶಿಲ್ಪ ಕಲಾ ಕ್ಷೇತ್ರ) ಹಾಗೂ ಸುಲೈಮಾನ್ ಭೀಮಂಡೆ (ಸಾಮಾಜಿಕ ಕ್ಷೇತ್ರ) ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಯುವಕ ಮಂಡಲದ ಗೌರವ ಸಲಹೆಗಾರ ಹಾಗೂ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಜತ್ತನ್ನ ಗೌಡ, ಗೌರವಾಧ್ಯಕ್ಷ ನಿತಿನ್ ಮೋನಿಸ್, ಕಾರ್ಯದರ್ಶಿ ಕಿರಣ್ ಸುವರ್ಣ ಸೇರಿದಂತೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಗೌರವ ಸಲಹೆಗಾರರಾದ ನೋಟರಿ ವಕೀಲರಾದ ಶ್ರೀನಿವಾಸ್ ಗೌಡ ಗೌಡ ಶ್ರೀ ಸೌಧ ಬೆಳಾಲು, ಅಧ್ಯಪಕರಾದ ಭರತ್ ಬೆಳಾಲು, ಅನಿಲ್ ಡಿ ಸೋಜ, ಶ್ಯಾಮ್ ರಾಯ ಆಚಾರ್ಯ, ಡೀಕಯ್ಯ ಗೌಡ ಅರಣೆಮಾರು,ಕೇಶವ ಟೈಲರ್, ದಿನೇಶ್, ಹರೀಶ್ ದರ್ಖಾಸು ಬೆಳಾಲು,ಹಾಗೂ ಬೆಳಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ, ಹಾಗೂ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿ ಸಹಕರಿಸಿದರು.

ನಿತಿನ್ ಮೋನಿಸ್ ಸ್ವಾಗತಿಸಿದರು. ಶ್ರೀನಿವಾಸ್ ಗೌಡ ಶ್ರೀ ಸೌಧ ಬೆಳಾಲು ನಿರೂಪಿಸಿದರು. ಕಿರಣ್ ಸುವರ್ಣ ವಿಜೇತರ ವಿವರ ವಾಚಿಸಿದರು. ರಮೀಝ್ ಭೀಮಂಡೆ, ಭವಿತ್ ಎಸ್.ವಿ. ಹಾಗೂ ಸಾತ್ವಿಕ್ ಸನ್ಮಾನ ಪತ್ರ ವಾಚಿಸಿದರು. ಹರ್ಷಿತ್ ಏರ್ದೊಟ್ಟು ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಕೃಷ್ಣ ವೇಷ ಸ್ಪರ್ಧೆ, ಮೊಸರು ಕುಡಿಕೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸ್ಥಳೀಯರು ಹಾಗೂ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.


