Breaking
20 Jun 2026, Sat

ಮಹಾಲಿಂಗೇಶ್ವರ ಭಜನಾ ಮಂಡಳಿ ದೈಲಬೆಟ್ಟು ಕಲ್ಲಮುಂಡ್ಜೂರು ರಾಜ್ಯ ಮಟ್ಟದ ಕುಣಿತ ಭಜನೆಯಲ್ಲಿ ಪ್ರಥಮ ಸ್ಥಾನ

ಮೂಡುಬಿದಿರೆ: ಮಹಾಪೀಠಂ, ಶ್ರೀ ಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪದ ಹೊನ್ನಾವರ ತಾಲೂಕು ಹಾಗೂ ಸಿಲೆಕ್ಟ್ ಫೌಂಡೇಶನ್ (ರಿ.) ಇವರ ವತಿಯಿಂದ ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ 2026ರ ಅಂಗವಾಗಿ ರಾಜ್ಯ ಮಟ್ಟದ ಕುಣಿತ ಭಜನೆ ಸ್ಪರ್ಧೆ ನಡೆಯಿತು.

ಈ ಸ್ಪರ್ಧೆಯಲ್ಲಿ ಬೆಂಗಳೂರಿನಲ್ಲಿ ಕಲಾರಾಜ್ಯೋತ್ಸವ ಪ್ರಶಸ್ತಿ ಹಾಗೂ ಶ್ರೇಷ್ಠ ಸಾಧಕ ಪುರಸ್ಕೃತ ಪ್ರಶಸ್ತಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪಡೆದ ಕುಣಿತಾ ಭಜನಾ ಗುರುಗಳಾದ ಅಶೋಕ್ ನಾಯ್ಕ್ ಕಳಸಬೈಲು ಸರ್ ನೇತೃತ್ವದ ಮಹಾಲಿಂಗೇಶ್ವರ ಭಜನಾ ಮಂಡಳಿಯ ಮೂಡಬಿದ್ರೆ ತಾಲೂಕಿನ ದೈಲಬೆಟ್ಟು – ಕಲ್ಲಮುಂಡ್ಕೂರು ತಂಡವು ಪ್ರಥಮ ಸ್ಥಾನವನ್ನು ಪಡೆದು ₹70,000 ನಗದು ಬಹುಮಾನ ಹಾಗೂ ಸ್ಮರಣಿಕೆ ಮತ್ತು ಪ್ರಶಸ್ತಿಪತ್ರಗಳನ್ನು ತನ್ನದಾಗಿಸಿಕೊಂಡಿತು.

ಈ ತಂಡದ ಕಾರ್ತಿಕ್ ಶೆಟ್ಟಿ ಗಾರ್, ರಾಶಿಕ, ಶೀತಲ್, ಅಕ್ಷಿತ್, ಕಾರುಣ್ಯ, ವೈಷ್ಣವಿ, ಸುಸ್ಮಿತಾ ಮತ್ತು ರೀತಿಕಾ ಗುರುರಾಘವೇಂದ್ರ ಭಜನಾ ಮಂಡಳಿ, ಚಿಟ್ಟೆಮಾರು (ಪುತ್ತಿಗೆ) ತಂಡದ ಭಜಕರಾದ ಚೈತ್ರ, ಅಶ್ರಿತ, ಯತೀಶ್, ಪೂರ್ಣಿಮಾ, ಪ್ರಧಾನ್, ಲಿಖಿತ್ ಸತ್ಯನಾರಾಯಣ ಭಜನಾ ಮಂಡಳಿ ಪುಪಾಡಿಕಲ್ಲು-ಇರುವೈಲು ತಂಡದ ನವ್ಯ ಎಡಪದವು, ಶ್ರಾವ್ಯ ಕಾಂಬೆಟ್ಟು ಮತ್ತು ಶಶಾಂಕ್ ಪುಪಾಡಿಕಲ್ಲು ಭಾಗವಹಿಸಿ ಉತ್ತಮ ಸಾಧನೆ ತೋರಿದರು.

ಅಶೋಕ್ ನಾಯ್ಕ್ ಗುರುಗಳು ಇವರ ತಂಡದ ಪ್ರದರ್ಶನ ನೀಡಿರುವುದು ಕಾರ್ಯಕ್ರಮದ ಒಂದು ವಿಶೇಷವಾಗಿತ್ತು. ಮಕ್ಕಳ ಧಾರ್ಮಿಕ ಶಿಸ್ತು ಇಡೀ ಕಾರ್ಯಕ್ರಮದ ಗಮನ ಸೆಳೆಯಿತು. ಇಂತಹ ಸಾಧನೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರೇರಣೆಯಾಗಲಿ ಎಂಬ ಆಶಯ ವ್ಯಕ್ತವಾಗಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ *ಅಶೋಕ್ ನಾಯ್ಕ್ ಕಳಸಬೈಲು ಕುಣಿತ ಭಜನಾ ಗುರುಗಳು, ಅಧ್ಯಕ್ಷರಾದ ಕೃಷ್ಣಕುಲಾಲ್, ಕಾರ್ಯದರ್ಶಿ ವಾಸುನಾಯ್ಕ್ , ಹಾರ್ಮೋನಿಯಂ ಹಾಗೂ ಸಂಗೀತ ಗುರುಗಳಾದ ವಿದ್ವಾನ್. ದುರ್ಗೇಶ್ ನಿಲುಗಲ್, ತಬಲಾದಲ್ಲಿ ಕೆ . ಪಿ. ವಿನೋದ್ ಇವರ ಸಹಕಾರದಿಂದ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಇಡೀ ಮೂಡಬಿದಿರೆ ತಾಲೂಕಿಗೆ ಕೀರ್ತಿಯನ್ನು ತಂದಿದೆ.

Leave a Reply

Your email address will not be published. Required fields are marked *