ಬೆಳ್ತಂಗಡಿ: ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ನೂತನ ಧರ್ಮಾಧ್ಯಕ್ಷ ಬಿಷಪ್ ಜೇಮ್ಸ್ ಪಟೇರಿಯಲ್ ಅವರನ್ನು ಶಾಸಕ ಹರೀಶ್ ಪೂಂಜ ಅವರು ಇಂದು ಅವರ ನಿವಾಸ ಮಿಥಿಲಾದಲ್ಲಿ ಭೇಟಿ ಮಾಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಚಾನ್ಸಲರ್ ಫಾ. ಲಾರೆನ್ಸ್ ಪುನೋಳಿ, ವಿಕಾರ್ ಜನರಲ್ ಫಾ. ಮಾನಿ, ಪ್ರೊಕ್ಯುರೇಟರ್ ಫಾ. ಸನ್ನಿ ಅಲಪಾಟ್, ಡಿಕೆಆರ್‌ಡಿಎಸ್ ನಿರ್ದೇಶಕ ಫಾ. ಆದರ್ಶ್, ಫಾ. ಕುರಿಯಕೋಸ್, ಫಾ. ಜೋಸೆಫ್ ಚೀರನ್, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಸೆಬಾಸ್ಟಿಯನ್ ಸೇರಿದಂತೆ ಸಮಾಜದ ಭಾಂದವರು, ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.





