Breaking
21 Jun 2026, Sun

ಮಂಗಳೂರು ಮೀನುಗಾರಿಕಾ ಬಂದರು ಸಮೀಪದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಮಂಗಳೂರು: ವ್ಯಕ್ತಿಯೊಬ್ಬರ ಮೃತದೇಹ ಮಂಗಳೂರು ನಗರದ ಮೀನುಗಾರಿಕಾ ಬಂದರಿನ ಸಮೀಪದ ನದಿಯಲ್ಲಿ ಏ. 08 ರಂದು ಪತ್ತೆಯಾಗಿದೆ.

ಬೆಂಗ್ರೆ ನಿವಾಸಿ ಮೊಹಿದ್ದೀನ್ ನಾಸಿರ್ (50) ಮೃತ ದುರ್ದೈವಿ.

ಮಂಗಳೂರು ಮೀನುಗಾರಿಕಾ ಬಂದರಿನ ಸಮೀಪದ ನದಿಯಲ್ಲಿ ಮೊಹಿದ್ದೀನ್‌ ನಾಸಿರ್‌ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿದ್ದು ಅಪರಿಚಿತರು ಹಲ್ಲೆ ನಡೆಸಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *