ಮೂಡುಬಿದಿರೆ: ಪ್ರಸಿದ್ಧ ಸಾಹಿತ್ಯಕರ್ತ ಶ್ರೀ ರೇಮಂಡ್ ಡಿ’ಕುನಾ ತಾಕೊಡೆ ಅವರಿಗೆ ಹುಟ್ಟೂರ ಸನ್ಮಾನ ಹಾಗೂ ಅವರ ತುಳು ಲಿಪಿಯ ಕೃತಿ ‘ನಾಲೋದಿ ಬೊಳ್ಳಿಲು’ ಪುಸ್ತಕ ಬಿಡುಗಡೆ ಸಮಾರಂಭವು ಮಾರ್ಚ್.22, 2026 ಭಾನುವಾರ ಬೆಳಗ್ಗೆ 10:00 ಗಂಟೆಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೆ. ಅಭಯಚಂದ್ರ ಜೈನ್ ವಹಿಸಲಿದ್ದಾರೆ. ಪುಸ್ತಕವನ್ನು ಡಾ. ಎಂ. ಮೋಹನ್ ಆಳ್ವಾ ಬಿಡುಗಡೆ ಮಾಡಲಿದ್ದು, ಶ್ರೀಮತಿ ಗೀತಾ ಲಕ್ಷ್ಮೀಶ್ ಶೆಟ್ಟಿ ಪುಸ್ತಕ ಪರಿಚಯ ಮಾಡಲಿದ್ದಾರೆ.

ಈ ಕಾರ್ಯಕ್ರಮವನ್ನು ತುಳುಕೂಟ (ರಿ), ಮೂಡುಬಿದಿರೆ, ವರ್ಕಿಂಗ್ ಜರ್ನಲಿಸ್ಟ್ಸ್ ಅಸೋಸಿಯೇಷನ್, ಪ್ರೆಸ್ ಕ್ಲಬ್, ಜೆಸಿಐ ಮೂಡುಬಿದಿರೆ ತ್ರಿಭುವನ್, ಅಭಿಮಾನಿ ಬಳಗ ತಾಕೊಡೆ, ಅಭಿಮಾನಿ ರಿಕ್ಷಾ ಚಾಲಕರ ಸಂಘ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ಸೇರಿದಂತೆ ಹಲವು ಸಂಘಗಳು ಸಂಯುಕ್ತವಾಗಿ ಆಯೋಜಿಸಿವೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





