Breaking
21 Jun 2026, Sun

94ಸಿ ಹಕ್ಕುಪತ್ರಕ್ಕಾಗಿ ಅರ್ಜಿ ನೀಡಲು ಅವಕಾಶ ಕೋರಿ ಪ್ರಭಾಕರ ಪ್ರಭು ಮನವಿ

ಬಂಟ್ವಾಳ: ಕರಾವಳಿ ಜಿಲ್ಲೆಯಲ್ಲಿ ಸಾವಿರಾರು ಮಂದಿ ಬಡವರು ಸರಕಾರಿ ಜಮೀನು ಹಾಗೂ ಕುಮ್ಕಿ ಸ್ಥಳದಲ್ಲಿ ಸಣ್ಣ ಗುಡಿಸಲು ಕಟ್ಟಿಕೊಂಡು ವಾಸ್ತವ ಇದ್ದು, ಹಕ್ಕು ಪತ್ರವಿಲ್ಲದೇ ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ವಿಫಲರಾಗಿದ್ದಾರೆ.

ಹಕ್ಕು ಪತ್ರವಿಲ್ಲದೇ ಮನೆ ನಂಬರ್ ಸಿಗದಿರುವುದರಿಂದ ವಿದ್ಯುತ್ ಸಂಪರ್ಕಕ್ಕೆ ತುಂಬಾ ತೊಂದರೆಯಾಗಿದೆ. ಕೆಲವೊಂದು ಕಡೆಗಳಲ್ಲಿ ಸಣ್ಣ ಪುಟ್ಟ ಮಕ್ಕಳ ಜೊತೆಗೆ ವಾಸ್ತವ ಇದ್ದುಕೊಂಡು ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
94 ಸಿ. ಅಡಿಯಲ್ಲಿ ಹಕ್ಕುಪತ್ರ ಪಡೆಯದೇ ಅರ್ಜಿ ಸಲ್ಲಿಸಲು ಅವಕಾಶ ಇಲ್ಲದಿರುವುದರಿಂದ ಅನಧಿಕೃತವಾಗಿ ವಾಸ್ತವ ಇರುವವರ ಕಷ್ಟ ಹೇಳತಿರದು.

ಈ ಎಲ್ಲಾ ಹಿನ್ನಲೆಯಲ್ಲಿ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸ್ತವ್ಯ ಇರುವವರಿಗೆ ಮನೆಯಡಿ ಸ್ಥಳದ ಹಕ್ಕುಪತ್ರ ಪಡೆಯುವರು 94 ಸಿ ಅಡಿಯಲ್ಲಿ ಅರ್ಜಿ ಸ್ವೀಕರಿಸುವ ಸರಕಾರದ ಹಿಂದಿನ ಆದೇಶವನ್ನು ಪರಿಷ್ಕರಣೆ ಮಾಡಿ ಹೊಸದಾಗಿ ಅರ್ಜಿ ಸ್ವೀಕರಿಸಲು ಅವಕಾಶ ಮಾಡಿಕೊಡಬೇಕಾಗಿ ಸರಕಾರದ ಮಟ್ಟದಲ್ಲಿ ಆದೇಶ ಹೊರಡಿಸಬೇಕೆಂದು ಬಂಟ್ವಾಳ ತಾಲೂಕು ಪಂಚಾಯತ್ ನ ಮಾಜಿ ಸದಸ್ಯರಾದ ಪ್ರಭಾಕರ ಪ್ರಭು ಅವರು ಮಾನ್ಯ ಕಂದಾಯ ಸಚಿವರಿಗೆ ಈ ಮೂಲಕ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *