Breaking
20 Jun 2026, Sat

ಸುಳ್ಯದಲ್ಲಿ ಗುಡುಗು ಸಹಿತ ಭಾರೀ ಮಳೆ: ಮರಗಳು ಉರುಳಿ ಮನೆಗಳಿಗೆ ಹಾನಿ

ಸುಳ್ಯ: ತಾಲೂಕಿನಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಹಲವೆಡೆ ಮರಗಳು ಉರುಳಿ ಬಿದ್ದು ಮನೆ ಹಾಗೂ ಕಟ್ಟಡಗಳಿಗೆ ಹಾನಿಯುಂಟಾದ ಘಟನೆ ಫೆ. 25ರಂದು ನಡೆದಿದೆ.

ಫೆ. 25ರಂದು ಸುರಿದ ಭಾರೀ ಮಳೆಯಿಂದ ಸುಳ್ಯದ ಗುರುಂಪು ನಿವಾಸಿ ಮುನೀರ್, ಸಂಪಾಜೆಯ ಪೆಲ್ತಡ್ಕದ ಚಂದ್ರಾವತಿ ಹಾಗೂ ಗೂನಡ್ಕದ ರಾಜ ಅವರ ಮನೆಗಳ ಮೇಲೆ ತೆಂಗಿನ ಮರಗಳು ಬಿದ್ದು ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಎಲಿಮಲೆಯಲ್ಲಿ ತೆಂಗಿನ ಮರವು ಎಲಿಮಲೆ ನೂರುಲ್ ಹುದಾ ಮದ್ರಸ ಕಟ್ಟಡದ ಮೇಲೆ ಬಿದ್ದು, ಕಟ್ಟಡಕ್ಕೆ ಭಾಗಶಃ ಹಾನಿಯಾಗಿದೆ.

Leave a Reply

Your email address will not be published. Required fields are marked *