ಸುಳ್ಯ: ಅರಂತೋಡು ಸಮೀಪದ ಕುಲ್ಚಾರು ಬಳಿ ಬೈಕ್ ಹಾಗೂ ರಿಟ್ಸ್ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸಂತೋಷ್ (17) ಚಿಕಿತ್ಸೆ ಫಲಿಸದೆ ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ.

ಮೃತರನ್ನು ಅರಂತೋಡು ಗ್ರಾಮದ ಬಿಳಿಯಾರು ಬನ ಸುಬ್ರಾಯ ಅವರ ಪುತ್ರ ಸಂತೋಷ್ ಎಂದು ಗುರುತಿಸಲಾಗಿದೆ.

ಅಪಘಾತದ ಬಳಿಕ ಸ್ಥಳೀಯರ ಸಹಕಾರದೊಂದಿಗೆ ಶರತ್ ಅಡ್ಯಡ್ಕ ಅವರು ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಪಘಾತದ ತೀವ್ರತೆಗೆ ಬೈಕ್ ಕಾರಿನ ಅಡಿಭಾಗಕ್ಕೆ ಸಿಲುಕಿ ಸಂತೋಷ್ ಗಂಭೀರವಾಗಿ ಗಾಯಗೊಂಡಿದ್ದರು.

ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿದರೂ, ಗಾಯಗಳ ತೀವ್ರತೆಯಿಂದ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



