Breaking
7 Sep 2026, Mon

ಉಜಿರೆ: ಕಾಶಿಬೆಟ್ಟು ಬಳಿ ‘ಸ್ಕೈ ಗ್ರೂಪ್ಸ್ ಅಲ್ಯೂಮಿನಿಯಂ ಏಜೆನ್ಸಿ’ ಶುಭಾರಂಭ

ಉಜಿರೆ: ಕಾಶಿಬೆಟ್ಟು ಬಳಿ ‘ಸ್ಕೈ ಗ್ರೂಪ್ಸ್ ಅಲ್ಯೂಮಿನಿಯಂ ಏಜೆನ್ಸಿ’ ಸೆ.6ರಂದು ಶುಭಾರಂಭಗೊಂಡಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಅವರು ದೀಪ ಬೆಳಗಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ, ಉದ್ಯಮ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹಲವು ಗಣ್ಯರು ಹಾಗೂ ಉದ್ಯಮದ ಹಿತೈಷಿಗಳು ಉಪಸ್ಥಿತರಿದ್ದರು. ಆಗಮಿಸಿದ ಅತಿಥಿಗಳನ್ನು ಸಂಸ್ಥೆಯ ಮಾಲಕರು ಆತ್ಮೀಯವಾಗಿ ಸ್ವಾಗತಿಸಿ ಸತ್ಕರಿಸಿದರು.

ಸಂಸ್ಥೆಯಲ್ಲಿ ಅಲ್ಯೂಮಿನಿಯಂ ಪ್ರೊಫೈಲ್‌ಗಳು, ಡೋರ್‌ಗಳು, ಎ.ಸಿ.ಪಿ. ಶೀಟ್, ಪಿ.ವಿ.ಸಿ. ಶೀಟ್, ಹಾರ್ಡ್‌ವೇರ್ ಹಾಗೂ ವಿವಿಧ ಫಿಟ್ಟಿಂಗ್ ಸಾಮಗ್ರಿಗಳು ಉತ್ತಮ ದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *