ಬೆಳಾಲು: ಮೈತ್ರಿ ಯುವಕ ಮಂಡಲ (ರಿ.) ಬೆಳಾಲು ಇದರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿರುವ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಸೆ.6ರಂದು ಯುವಕ ಮಂಡಲದ ವಠಾರದಲ್ಲಿ ನಡೆಯಿತು.


ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಅನಂತೋಡಿ ಬೆಳಾಲು ಇದರ ಅರ್ಚಕರಾದ ಸಂಪತ್ ಕುಮಾರ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಉದ್ಯಮಿ ಸತೀಶ್ ಗೌಡ ಗಣಪನಗುತ್ತು ಹಾಗೂ ಶ್ರೀ ಧ.ಮ. ಪ್ರೌಢಶಾಲೆ ಬೆಳಾಲಿನ ಅಧ್ಯಾಪಕ ಕಿರಣ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷ ನಿತಿನ್ ಮೋನಿಸ್, ಅಧ್ಯಕ್ಷ ನವನೀತ್ ಗೌಡ ಹಾಗೂ ಕಾರ್ಯದರ್ಶಿ ಕಿರಣ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗೌರವ ಸಲಹೆಗಾರರು ಹಾಗೂ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಜತ್ತನ್ನ ಗೌಡ, ನೋಟರಿ ವಕೀಲ ಶ್ರೀನಿವಾಸ್ ಗೌಡ, ವಕೀಲ ಕೇಶವ್ ಗೌಡ ಪಿ., ಅಧ್ಯಾಪಕರಾದ ಭರತ್ ಬೆಳಾಲು, ಅನಿಲ್ ಡಿ. ಸೋಜ, ಶ್ಯಾಮ್ ರಾಯ ಆಚಾರ್ಯ, ಡೀಕಯ್ಯ ಗೌಡ ಅರಣೆಮಾರು, ಕೇಶವ ಟೈಲರ್, ದಿನೇಶ್, ಹರೀಶ್ ದರ್ಖಾಸು ಬೆಳಾಲು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಸೇರಿದಂತೆ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ವಾತಿ ಪ್ರಾರ್ಥನೆ ನೆರವೇರಿಸಿದರು. ಯುವಕ ಮಂಡಲದ ಅಧ್ಯಕ್ಷ ನವನೀತ್ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ಕಿರಣ್ ಸುವರ್ಣ ಈರೆಂತ್ಯಾರು ಧನ್ಯವಾದ ಅರ್ಪಿಸಿದರು. ಅಧ್ಯಾಪಕ ಭರತ್ ಕಾರ್ಯಕ್ರಮ ನಿರೂಪಿಸಿದರು.

ಉತ್ಸವದ ಅಂಗವಾಗಿ ಆಕರ್ಷಕ ಕೃಷ್ಣ ವೇಷ ಸ್ಪರ್ಧೆ, ಮೊಸರು ಕುಡಿಕೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.


