Breaking
26 Feb 2026, Thu

ಅನಂತಾಡಿ :ಶ್ರೀ ಉಳ್ಳಾಲ್ತಿ ಮಾಡ ರಸ್ತೆ ಲೋಕಾರ್ಪಣೆ

ಮಾಣಿ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಅನುದಾನದಿಂದ ಸುಸಜ್ಜಿತವಾಗಿ ನಿರ್ಮಾಣ ಆಗುತ್ತಿರುವ ಕಾರಾಂಬಲ್ಲೆ – ಬಂಟ್ರಿಂಜಾ ಶ್ರೀ ಉಳ್ಳಾಲ್ತಿ ಮಾಡ ಸರ್ವಋತು ರಸ್ತೆಯನ್ನು ಲೋಕಾರ್ಪಣೆ ಫೆ. 25 ರಂದು ಮಾಡಲಾಯಿತು.

ಉಳ್ಳಾಲ್ಥಿ ದೈವಸ್ಥಾನದ ಆಡಳಿತ ಮುಕ್ತೇಸರ ಮೋಹನ್ ಪೈ, ಕರಿಂಕ ದೇವಾಲಯದ ಆಡಳಿತ ಮುಕ್ತೇಸರ ನರೇಂದ್ರ ರೈ ಮತ್ತು ಬಿಜೆಪಿ ಜಿಲ್ಲಾ ವಕ್ತಾರ ಮಾಧವ ಮಾವೆ ಅವರು ಕಾಯಿ ಹೊಡೆದು ರಸ್ತೆಯನ್ನು ಲೋಕಾರ್ಪಣೆ ಮಾಡಿದರು. ಶ್ರೀ ಎಮ್.ಪಿ ಪೈ ಮತ್ತು ರಾಮಕೃಷ್ಣ ರೈ ಅವರು ಈ ರಸ್ತೆಗೆ ಜಮೀನು ನೀಡಿದ್ದನ್ನು ಈ ಸಂದರ್ಭದಲ್ಲಿ ನೆನಪು ಮಾಡಲಾಯಿತು.

ಈ ವೇಳೆ ನೀರಿನ ಸಹಕಾರ ನೀಡಿದ ವೆಂಕಪ್ಪ ಗೌಡ, ದಯಾನಂದ ಮಡಿವಾಳ ಸುಮತಿ ಮಡಿವಾಲ್, ಬಾಲಕೃಷ್ಣ ಮಡಿವಾಳ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತುಂಬೇಕೋಡಿ ಬಾಲಕೃಷ್ಣ ಶೆಟ್ಟಿ, ಮೋನಪ್ಪ ಗೌಡ ತಾರಿಪಡ್ಪು, ನಾರಾಯಣ ಶೆಟ್ಟಿ ಪುಣ್ಕೇದಡಿ, ಮಂಡಲ ಕಾರ್ಯದರ್ಶಿ ಸನತ್ ಕುಮಾರ್ ರೈ, ಮಾಣಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ್ ರೈ ಮುರ್ಜೆಬೆಟ್ಟು, ಪ್ರಧಾನ ಕಾರ್ಯದರ್ಶಿ ನಾಗೇಶ್ ಭಂಡಾರಿ, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೇ ಸುಜಾತಾ, ಉಪಾಧ್ಯಕ್ಷೇ ಸಂಧ್ಯಾ, ನಿಕಟಪೂರ್ವ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಟ್ರಿಂಜಾ, ಉಪಾಧ್ಯಕ್ಷ ಕುಸುಮಧರ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯೆ ಗೀತಾ, ಶಕ್ತಿ ಕೇಂದ್ರ ಪ್ರಮುಖ್ ಮಹಾಬಲ ಪೂಜಾರಿ, ಬೂತ್ ಅಧ್ಯಕ್ಷರಾದ ರಮೇಶ್ ಗೌಡ(209), ಶ್ರೀ ನಾರಾಯಣ ಗೌಡ(210)ಕಾರ್ಯದರ್ಶಿಗಳಾದ ಶ್ರೀ ಅಶೋಕ್, ಕೇಶವ ಕಿದೆನಾರ್, ಶಶಿಕಾಂತ್ ಶೆಟ್ಟಿ, ನವೀನ್ ಶೆಟ್ಟಿ ಪುಣ್ಕೇದಡಿ, ಸೊಸೈಟಿ ಉಪಾಧ್ಯಕ್ಷ ತನಿಯಪ್ಪ ಗೌಡ, ನಿರ್ದೇಶಕ ವೆಂಕಟೇಶ್ ಕೋಟ್ಯಾನ್, ಕಿರಣ್ ಪೂಜಾರಿ, ಜಯಂತಿ, ಪದ್ಮಾವತಿ ಶೋಭಾ, ಪ್ರೇಮ, ರಮೇಶ್ ಪೋಯ್ಯ, ವಂದನಾ, ಅರವಿಂದ್ ಕೊಂಡೆ, ಸಂಜೀವ ಮಡಿವಾಳ, ಕಿರಣ್ ಬಂಟ್ರಿಂಜ ತಿಮ್ಮಪ್ಪ ಗೌಡ ನಿತಿನ್ ರೈ, ರಾಮಕೃಷ್ಣ ಗೌಡ ಸೇರಿದಂತೆ ನೂರಾರು ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *