ನೇತಾಜಿ ಬ್ರಿಗೇಡ್ (ರಿ.), ಮೂಡುಬಿದಿರೆ ವತಿಯಿಂದ ಹಮ್ಮಿಕೊಂಡ 22ನೇ ಸೇವಾ ಯೋಜನೆ ಮೂಡುಬಿದಿರೆ ಕೋಟಿ–ಚೆನ್ನಯ ಜೋಡುಕರೆ ಕಂಬಳ ಮೈದಾನದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಕಂಬಳದಲ್ಲಿ ಸೇವಾ ಯೋಜನೆಯ ಅಂಗವಾಗಿ ಪದಾಧಿಕಾರಿಗಳಾದ ಸುಶಾಂತ್ ಸುವರ್ಣ, ನಿಖಿಲ್ ಭಟ್ ಹಾಗೂ ಸುಶಾಂತ್ ಚಾಮುಂಡಿ ಬೆಟ್ಟ ಅವರು ವಿಶೇಷ ವೇಷವನ್ನು ಧರಿಸಿ ಒಟ್ಟು ₹1,88,928 ಮೊತ್ತವನ್ನು ಸಂಗ್ರಹಿಸಲಾಯಿತು.

ಸೇವಾ ಯೋಜನೆ ಯಶಸ್ವಿಯಾಗಲು ಸಂಪೂರ್ಣ ಸಹಕಾರ ನೀಡಿದ ಕೋಟಿ–ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಉಮಾನಾಥ ಎ. ಕೋಟ್ಯಾನ್, ಕಾರ್ಯದರ್ಶಿಗಳಾದ ರಂಜಿತ್ ಪೂಜಾರಿ, ನಾಗರಾಜ್ ಪೂಜಾರಿ ಸೇರಿದಂತೆ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಅಲ್ಲದೆ, ಆಳ್ವಾಸ್ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯಾದ ವಿವೇಕ್ ಆಳ್ವ, ಆಳ್ವಾಸ್ ವಿದ್ಯಾ ಸಂಸ್ಥೆಯ ಯುವ ಉತ್ಸಾಹಿ ತರುಣರಿಗೆ, ಜೈನ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಪ್ರಭಾತ್, ಹಿನ್ನೆಲೆ ಧ್ವನಿ ನೀಡಿದ ನಮ್ಮ ಯುವ ವಾಗ್ಮಿ ಶ್ರೀನಿತ್ ಶೆಟ್ಟಿ (ಮರ್ನಾಡ್) ಅವರಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು.









