ಮೂಡುಬಿದಿರೆ : ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ “ಭರವಸೆಯ ಬದುಕಿಗೆ ಬೆಳಕು ನೀಡೋಣ” 22 ನೇ ಸೇವಾ ಯೋಜನೆಯಲ್ಲಿ ಸಂಗ್ರಹವಾದ ಒಟ್ಟು 1,88,928 ರೂಪಾಯಿಗಳನ್ನು ಮೂಡುಬಿದಿರೆ ಕೋಡಂಗಲ್ಲು ನಿವಾಸಿಯಾದ “ಅದ್ವಿತ್ ಡಿ ದೇವಾಡಿಗ” ಮತ್ತು ಪುತ್ತಿಗೆ ನಿವಾಸಿಯಾದ “ಅಕ್ಷತಾ ಕುಮಾರಿ” ರವರಿಗೆ ತಲಾ ₹94464/- ರಂತೆ ಇಬ್ಬರಿಗೂ ವಿತರಿಸಲಾಯಿತು.

ಕಾರ್ಯಕ್ರಮದ ವೇಳೆ ವೇಷವನ್ನು ಧರಿಸಿದ ಪದಾಧಿಕಾರಿಗಳಾದ “ಸುಶಾಂತ್ ಸುವರ್ಣ, ನಿಖಿಲ್ ಭಟ್, ಸುಶಾಂತ್ ಚಾಮುಂಡಿ ಬೆಟ್ಟ” ರವರನ್ನು ಗೌರವಿಸಲಾಯಿತು.
ಈ ವೇಳೆ ನಮ್ಮ ಸೇವಾ ಯೋಜನೆಗೆ ಸಂಪೂರ್ಣವಾಗಿ ಸಹಕಾರ ನೀಡಿರುವ ಆಳ್ವಾಸ್ ವಿದ್ಯಾ ಸಂಸ್ಥೆಯ ಯುವ ಉತ್ಸಾಹಿ ತರುಣರಿಗೆ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭಾ ನಿಕಟ ಪೂರ್ವ ಉಪಾಧ್ಯಕ್ಷರಾದ ನಮ್ಮ ಗೌರವ ಸಲಹೆಗಾರರಾದ ನಾಗರಾಜ್ ಪೂಜಾರಿ , ಮೂಡುಬಿದಿರೆ ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಕಾರ್ಯದರ್ಶಿಗಳಾದ “ ರಂಜಿತ್ ಪೂಜಾರಿ” , ಉದ್ಯಮಿಗಳಾದ “ಸಂತೋಷ್ ಶೆಟ್ಟಿ” ಪುತ್ತಿಗೆ ಗುತ್ತು. ಆಳ್ವಾಸ್ ತರುಣರ ನಾಯಕರಾದ “ಧನುಷ್ ಕುಲಾಲ್” ನೇತಾಜಿ ಬ್ರಿಗೇಡ್ ಸ್ಥಾಪಕರು , ಅಧ್ಯಕ್ಷರು ನಮ್ಮೆಲ್ಲ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.









