Breaking
21 Jun 2026, Sun

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.) ಮಿಜಾರ್ ದ. ಕ ಕರ್ನಾಟಕ: 61ನೇ ಸೇವಾ ಯೋಜನೆ ಹಸ್ತಾಂತರ

ಮೂಡಬಿದಿರೆ: ಅಶಕ್ತ ಕುಟುಂಬಕ್ಕೆ ಆರ್ಥಿಕ ನೆರವು ನೀಡುತ್ತಾ ಬಂದಿರುವ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.)ಮಿಜಾರ್ ದ. ಕ ಕರ್ನಾಟಕ ತನ್ನ 61ನೇ ಸೇವಾರ್ಥವಾಗಿ ರಾಮ ಕೃಷ್ಣ ನಾಯ್ಕ್ ಅವರಿಗೆ ಧನಸಹಾಯದ ಚೆಕ್ ಹಸ್ತಾಂತರಿಸಿದೆ.

ತೆಂಕಮಿಜಾರು ಶಾಂತಿಗಿರಿ ನಿವಾಸಿಯಾದ ರಾಮ ಕೃಷ್ಣ ನಾಯ್ಕ್ ಇವರು ನರಸಂಬಂಧಿ (ಪಕ್ಷಪಾತ M.N.D) ಖಾಯಿಲೆಯಿಂದ ಬಳಲುತ್ತಿದ್ದು ಎರಡು ದಿನಕೊಮ್ಮೆ ಫಿಸಿಯೋಥೆರಪಿ ಮಾಡುತ್ತಿದ್ದಾರೆ. ತನ್ನ ಹೆಂಡತಿ ಹಾಗೂ ಎರಡು ಪುಟ್ಟ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ಇವರು ಮುಂದಿನ ಚಿಕಿತ್ಸೆಗೆ ಸಹಾಯಧನ ನೀಡಿ ಎಂದು ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.)ಮಿಜಾರ್ ತಂಡಕ್ಕೆ ಮನವಿ ನೀಡಿದ್ದರು. ಇವರ ಮನವಿಗೆ ಸ್ಪಂದಿಸಿದ ತಂಡ, ವಿಷ್ಣು ಮೂರ್ತಿ ದೇವಸ್ಥಾನ ಮಿಜಾರ್ ಇದರ ಪ್ರಧಾನ ಅರ್ಚಕರಾದ ರಾಘವೇಂದ್ರ ಪೇಜತ್ತಾಯ ಇವರ ಮೂಲಕ 15ಸಾವಿರ ರೂ. ಧನಸಹಾಯದ ಚೆಕ್ ನ್ನು ಹಸ್ತಾಂತರಿಸಿದರು.

ಈ ಸಂದರ್ಭ ಉದಯವಾಣಿ ಪತ್ರಿಕೆಯ ಉಪಾಧ್ಯಕ್ಷರಾದ ರಾಮಚಂದ್ರ ನಾಯ್ಕ್ ಮಿಜಾರ್, ತಂಡದ ಸಂಸ್ಥಾಪಕ ನವೀನ್ ಪಿ ಮಿಜಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *