Breaking
22 Mar 2026, Sun

ಮೂಡುಬಿದಿರೆ: ಸೃಷ್ಟಿ ಗಾರ್ಡನ್ ನಲ್ಲಿ ಕಂಬಳ ಸಮಿತಿಯ ಸಭೆ

ಮೂಡುಬಿದ್ರೆ: ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಅವರ ಅಧ್ಯಕ್ಷತೆಯಲ್ಲಿ ಸೆ. 28ರಂದು ಕಂಬಳ ಸಮಿತಿಯ ಸಭೆಯು ಸೃಷ್ಟಿ ಗಾರ್ಡನ್ ನಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಕಂಬಳಕ್ಕೆ ನಮ್ಮ ಹಿರಿಯರು ಅಪಾರ ಕೊಡುಗೆ ನೀಡಿದ್ದು, ಈ ಕಂಬಳವನ್ನು ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಗುರುತಿಸಿ ಬೆಳೆಸಲು ಎಲ್ಲರ ಸಹಕಾರ ಅಗತ್ಯವಿದೆ. ನಮ್ಮ ಕಂಬಳಕ್ಕೆ ರಾಜ್ಯ ಸರ್ಕಾರ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಾನ್ಯ ಮುಖ್ಯಮಂತ್ರಿಗಳ ಆದೇಶದಂತೆ ಪ್ರಾಧಿಕಾರದಲ್ಲಿ ಮಾನ್ಯತೆಯನ್ನು ನೀಡಿ ಪುರಸ್ಕರಿಸಿರುವುದು ಎಲ್ಲಾ ಕಂಬಳ ಅಭಿಮಾನಿಗಳಿಗೆ ಸಂತೋಷವನ್ನು ತಂದಿರುತ್ತದೆ.

ಕಂಬಳದ ಅನುದಾನದ ಸ೦ಹಿತೆಗೆ ಕಂಬಳದ ಕಾನೂನು ರೂಪಿಸಲು ಪ್ರಾಧಿಕಾರವು ವಿಶೇಷವಾಗಿ ಬೈಲಾವನ್ನು ರಚಿಸಿ ಸರಕಾರ ಮಾನ್ಯತೆ ನೀಡಿ ಸರಕಾರವು ಕಂಬಳವನ್ನು ಗುರುತಿಸಿದೆ.

ರಾಜ್ಯ ಕಂಬಳ ಅಸೋಸಿಯೇಷನ್ ಮತ್ತು ಕೇಂದ್ರ ಸರಕಾರದಿಂದ ಕೂಡ ಕಂಬಳಕ್ಕೆ ವಿಶೇಷ ಮಾನ್ಯತೆ ನೀಡಲು ಕಂಬಳ ಫೆಡರೇಶನ್ ಆಫ್ ಇಂಡಿಯಾ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಮುಂದೆ ಕೇಂದ್ರ ಕ್ರೀಡಾ ಪ್ರಾಧಿಕಾರದಲ್ಲಿ ಕಂಬಳಕ್ಕೆ ಮಾನ್ಯತೆ ನೀಡಲು ಪ್ರಯತ್ನಿಸಲಾಗುವುದು ಎಂದರು.

ಸಭೆಯಲ್ಲಿ 2025/26 ನೇ ಸಾಲಿನಲ್ಲಿ ನಡೆಯುವ ಕಂಬಳಗಳಿಗೆ ದಿನಾಂಕಗಳನ್ನು ನಿಗದಿ ಪಡಿಸಲಾಯಿತು.

ವೇದಿಕೆಯಲ್ಲಿ ಭಾಸ್ಕರ ಸುಬ್ಬಯ್ಯ ಕೊಟ್ಯಾನ್ ಗುಣಪಾಲ ಕಡಂಬ PR ಶೆಟ್ಟಿ, ಶಾಂತರಾಮ್ ಶೆಟ್ಟಿ ,ಶ್ರೀಕಾಂತ್ ಭಟ್, ರೋಹಿತ್ ಹೆಗಡೆ, ವಿಜಯಕುಮಾರ್ ಕಂಗಿನಮನೆ, ಲೋಕೇಶ್ ಶೆಟ್ಟಿ ಮುಚ್ಚುರು, ಚಂದ್ರಹಾಸ್ ಸಾಧು ಸನಿಲ್, ಹಾಗೂ ಪದಾಧಿಕಾರಿಗಳು ಮತ್ತು ಎಲ್ಲಾ ಕಂಬಳದ ವ್ಯವಸ್ಥಾಪಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *