ಕಲ್ಲಡ್ಕ : ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಕಲ್ಲಡ್ಕ ಇದರ ಆಶ್ರಯದಲ್ಲಿ ಜರಗುವ 48ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಅಂಗವಾಗಿ “ಮಾರ್ನೆಮಿದ ಗೊಬ್ಬು” ಕ್ರೀಡಾಕೂಟ ಸೆ. 28ರಂದು ಕಲ್ಲಡ್ಕ ಉತ್ಸವದ ಅಂಗಣದಲ್ಲಿ ಜರಗಿತು.

ಓಂ ಶಕ್ತಿ ಫ್ರೆಂಡ್ಸ್ ನ ಗೌರವಾಧ್ಯಕ್ಷ ರತ್ನಾಕರ ಶೆಟ್ಟಿ ಮತ್ತು ಹಿರಿಯ ಕಬಡ್ಡಿ ಕ್ರೀಡಾಪಟು ಸಂಜೀವ ಸಪಲ್ಯ ಇವರು ದೀಪ ಬೆಳಗಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ರತ್ನಾಕರ ಶೆಟ್ಟಿಯವರು ಆಧುನಿಕ ಯುಗದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಸಮಯದಲ್ಲಿ, ಎಲ್ಲರನ್ನೂ ಕ್ರೀಡಾಂಗಣಕ್ಕೆ ಕರೆ ತರಲು ಈ ರೀತಿಯ ಕ್ರೀಡಾಕೂಟಗಳ ಆಯೋಜನೆ ಎಲ್ಲಾ ಕಡೆ ನಡೆಯಲಿ ಎಂದು ಆಶಿಸಿದರು.

ವೇದಿಕೆಯಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಹಾಗೂ ಕಾರ್ಯದರ್ಶಿ ಪ್ರಮಿತ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷರಾದ ಯತೀನ್ ಕುಮಾರ್ ಸ್ವಾಗತಿಸಿ ಪ್ರದಾನ ಕಾರ್ಯದರ್ಶಿ ವಜ್ರನಾಥ್ ಕಲ್ಲಡ್ಕ ವಂದಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.




