Breaking
22 Mar 2026, Sun

ಸಿದ್ಧಕಟ್ಟೆ: ರೋಟರಿ ಕ್ಲಬ್ ಫಲ್ಗುಣಿ ಸಿದ್ದಕಟ್ಟೆ: ಉಚಿತ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿಯ ಸಮಾರೋಪ ಸಮಾರಂಭ

ಸಿದ್ಧಕಟ್ಟೆ: ರೋಟರಿ ಕ್ಲಬ್ ಫಲ್ಗುಣಿ ಸಿದ್ದಕಟ್ಟೆ, ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಮಂಗಳೂರು, ಸಿಸಿ ಟೆಕ್ ತಾಂತ್ರಿಕ ಶಿಕ್ಷಣ ಘಟಕ ಮಂಗಳೂರು ಇದರ ಸಹಭಾಗಿತ್ವದಲ್ಲಿ ನಡೆದ ಮೂರು ತಿಂಗಳ ಉಚಿತ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿಯ ಸಮಾರೋಪ ಸಮಾರಂಭವು ಸೆ. 26 ರಂದು ಸಿದ್ದಕಟ್ಟೆ ಪಿಂಕಿ ಟವರ್ಸ್ ನಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಬಳಿಕ 3000 ಮಹಿಳೆಯರಿಗೆ ಹೊಲಿಗೆ ಹಾಗೂ ಫ್ಯಾಶನ್ ಡಿಸೈನ್ ತರಬೇತಿ ನೀಡಿದ ಕುಮಾರಿ ಪ್ರೇಮ ಕೆ. ಇವರನ್ನು ಸನ್ಮಾನಿಸಲಾಯಿತು.

ಹೊಲಿಗೆ ಕಲಿಯಲು ಸ್ಥಳಾವಕಾಶ ಹಾಗೂ ಪ್ರಾಯೋಜಕತ್ವ ನೀಡಿ 250 ರಷ್ಟು ಹೊಲಿಗೆ ಯಂತ್ರಗಳನ್ನು ವಿತರಿಸಿದ ಮೈಕಲ್ ಡಿಕೋಸ್ತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಲೀನಾ ಥಾಮಸ್ ಲೋಬೊ, ಪ್ರೆಸಿಲ್ಲ ಡಿಕೋನ್ನ , ಇವರನ್ನು ಸನ್ಮಾನಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ರೋಟರಿ ಫಲ್ಗುಣಿ ಸಿದ್ದಕಟ್ಟೆ ಇದರ ಅಧ್ಯಕ್ಷರಾದ ದುರ್ಗಾದಾಸ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಮಂಗಳೂರು ಇಲ್ಲಿಯ ಪ್ರಾಂಶುಪಾಲರಾದ ನಾರಾಯಣಸ್ವಾಮಿ, ರೊಟೇರಿಯನ್ ಪಿ.ಹೆಚ್.ಎಫ್‌ ರಾಮಚಂದ್ರ ಶೆಟ್ಟಿಗಾರ್, ಸಿಸಿ ಟೆಕ್ ತಾಂತ್ರಿಕ ಶಿಕ್ಷಣ ಘಟಕ ಮಂಗಳೂರು ಇದರ ಮ್ಯಾನೇಜರ್ ರವೀಂದ್ರ ಎಂ ಕೇಣಿ, ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು ಆಟೋಮೊಬೈಲ್ ವಿಭಾಗ ಮುಖ್ಯಸ್ಥ ದೇವರಾಜ್ , ರೋಟರಿ ಕ್ಲಬ್ ನ ಸದಸ್ಯರಾದ ರೊ. ಗಣೇಶ್ ಶೆಟ್ಟಿ, ರೊ. ಥಾಮಸ್ ಡಿಕೋಸ್ತ , ರೊ. ಪದ್ಮನಾಭ, ರೊ. ಜೈಸನ್, ರೊ. ನೋಣಯ ಶೆಟ್ಟಿಗಾರ್, ರೊ. ಪ್ರಮೀಳ, ರೊ. ಹರೀಶ್, ರೊ. ಹೊನ್ನಯ್ಯ ಕಾಟಿಪಳ್ಳ, KPT ಸಿಬ್ಬಂದಿ ರೊನಾಲ್ಡ್ ಮಿರಾಂದ ಮತ್ತಿತರರು ಉಪಸ್ಥಿತರಿದ್ದರು.

ರಾಜಶ್ರೀ ಭಟ್ ಪ್ರಾರ್ಥಿಸಿ, ರೊ. ಮೈಕಲ್ ಡಿಕೋಸ್ತ ಪ್ರಾಸ್ತಾವಿಸಿ, ಮಮತಾ ಸ್ವಾಗತಿಸಿ, ಟೀನಾ ಡಿಕೋಸ್ತ ವಂದಿಸಿದರು. ಶ್ರೀಶಂಕರಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *