ಪುತ್ತೂರು: ಪಡಿತರ ಅಕ್ಕಿ ಮಾರಾಟ ವಿಚಾರವಾಗಿ ತಂದೆ ಮಗನ ಮೇಲೆ ಹಲ್ಲೆ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಆರೋಪ ಹೊತ್ತಿರುವ ತಂದೆ ನಾಪತ್ತೆಯಾಗಿರುವುದು ತಿಳಿದುಬಂದಿದೆ.
ಕಾಣೆಯಾದ ವ್ಯಕ್ತಿಯನ್ನು ಕೆದಂಬಾಡಿಯ ಇಡಪಾಡಿ ನಿವಾಸಿ ಚೋಮ (65) ಎಂದು ಗುರುತಿಸಲಾಗಿದೆ.

ಸೆ. 3 ರಂದು ಚೋಮ ತನ್ನ ಎರಡನೇ ಮಗ ರವಿಯೊಂದಿಗೆ ಸೇರಿ, ಪಡಿತರ ಅಕ್ಕಿ ಮಾರಾಟ ಮಾಡುವ ಬಗ್ಗೆ ಪ್ರಶ್ನಿಸಿ, ತನ್ನ ಹಿರಿಯ ಮಗ ಪುರಂದರ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಗಾಯಗೊಂಡಿದ್ದ ಪುರಂದರ್ ಅವರನ್ನು ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತು.

ಈ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಸೆ. 3 ರಂದು ಪುರಂದರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ, ಚೋಮಾ ಇನ್ನೂ ಮನೆಯಲ್ಲಿದ್ದರು, ಬಳಿಕ ಚೋಮ ಕಾಣೆಯಾಗಿದ್ದಾರೆ. ಈ ಕುರಿತು ಅವರ ಪತ್ನಿ ಸುಶೀಲಾ ಅವರು ನಾಪತ್ತೆ ದೂರು ದಾಖಲಿಸಿದ್ದಾರೆ.



