Breaking
6 Aug 2026, Thu

ಸಜೀಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಲಿತ ಪಂಚಮಿ ಹಾಗೂ ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ

ಬಂಟ್ವಾಳ: ಸಜೀಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ಲಲಿತ ಪಂಚಮಿ ಪರ್ವಕಾಲದ ಶ್ರೀ ದುರ್ಗಾ ನಮಸ್ಕಾರ ಪೂಜೆ, ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮವು ನೆರವೇರಿತು.

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ವಿಧಿವಿಧಾನದಲ್ಲಿ ಮಹಿಳೆಯರಿಂದ ಅರ್ಚನೆ , ಕುಂಕುಮರ್ಚನೆ ಭಜನಾ ಕಾರ್ಯಕ್ರಮಗಳು ಜರುಗಿದವು. ಭಕ್ತಾದಿಗಳು ಶ್ರೀ ದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳಂಜ ವೆಂಕಟೇಶ್ವರ ಭಟ್, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯ ಶಂಕರ ಬಾಸ್ರೀತಾಯ, ಅರ್ಚಕ ಗಣಪತಿ ಮಹಾಬಲೇಶ್ವರ ಭಟ್, ಜಿ ರಾಮಕೃಷ್ಣ ಭಟ್. ಕೆ, ರಾಧಾಕೃಷ್ಣ ಆಳ್ವ, ಸೋಮನಾಥ ಭಂಡಾರಿ, ಪ್ರವೀಣ್ ಆಳ್ವ, ಪ್ರವೀಣ್ ಭಂಡಾರಿ ಸುಭಾಷ್ ಶೆಟ್ಟಿ, ಕಿಶನ್ ಸೇನವ, ಸುಧಾಕರ ಕೆಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *