ಬಂಟ್ವಾಳ: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತ ಆರೋಪಿಯನ್ನು ಅಳಿಕೆ ಗ್ರಾಮದ ಮಹಮ್ಮದ್ ಇರ್ಷಾದ್ ಕೆ.ಎ (32) ಎಂದು ಗುರುತಿಸಲಾಗಿದೆ.

ಈತನ ವಿರುದ್ದ ವಿಟ್ಲ ಪೊಲೀಸ್ ಠಾಣಾ ಕ್ರ.26/2018ರಲ್ಲಿ ದಾಖಲಾದ ಕಲಂ 447, 341, 504, 323, 324, 354, 506 r/w 34 IPC ಪ್ರಕರಣ ದಾಖಲಾಗಿದ್ದು ಮಾನ್ಯ ನ್ಯಾಯಾಲಯವು C.C 1565/2023ರಲ್ಲಿ ವಾರಂಟ್ ಹೊರಡಿಸಿತ್ತು.
ಇದಲ್ಲದೆ, ಇರ್ಷಾದ್ ವಿರುದ್ಧ ಇನ್ನೂ ಹಲವಾರು ಗಂಭೀರ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.





