Breaking
22 Mar 2026, Sun

ಮೂಡುಬಿದಿರೆ: ಮಲಗಿದ್ದಲ್ಲಿ ರಕ್ತಕಾರಿ ಎಂಜಿನಿಯರ್‌ ಸಾವು : ಆತ್ಮಹತ್ಯೆ ಶಂಕೆ

ಮೂಡುಬಿದಿರೆ: ಜೈನ್‌ ಪೇಟೆ ಬಳಿ ಎಂಜಿನಿಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ(ಜು.02) ಬೆಳಕಿಗೆ ಬಂದಿದೆ.

ಮೃತಪಟ್ಟವರನ್ನು ದೇವಿಕೃಪಾ ಅಪಾರ್ಟ್‌ಮೆಂಟಿನ ನಿವಾಸಿ ಎಂಜಿನಿಯರ್‌ ಸುಧಾಕರ ಆಚಾರ್ಯ (45) ಎಂದು ಗುರುತಿಸಲಾಗಿದೆ.

ಅಪಾರ್ಟ್‌ಮೆಂಟಿನಲ್ಲಿ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ ಸುಧಾಕರ್‌ ಅವರು ಮಲಗಿದ್ದಲ್ಲಿ ರಕ್ತಕಾರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು. ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮೂಲತಃ ಚಿಕ್ಕಮಗಳೂರಿನವರಾಗಿದ್ದ ಇವರು ಶಿಕ್ಷಕಿಯಾಗಿರುವ ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಈ ಕುರಿತು ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *