Breaking
22 Mar 2026, Sun

ಮಂಗಳೂರು : ಕಾರಿನಲ್ಲಿ ವಿದ್ಯಾರ್ಥಿಗಳ ಸ್ಟಂಟ್‌: 6,500 ರೂ ದಂಡ

Mangaluru: ಚಲಿಸುತ್ತಿದ್ದ ಕಾರಿನಲ್ಲಿ ವಿದ್ಯಾರ್ಥಿಗಳ ಸ್ಟಂಟ್‌: 6,500 ರೂ. ದಂಡ

ಮಂಗಳೂರು : ಚಲಿಸುತ್ತಿದ್ದ ಕಾರಿನಿಂದ ಹೊರಬಂದು ಸ್ಟಂಟ್‌ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಪೊಲೀಸರು ದಂಡ ವಿಧಿಸಿದ ಘಟನೆ ನಗರದ ವಳಚ್ಚಿಲ್‌ ಸಮೀಪ ರಾಷ್ಟ್ರೀಯ ಹೆದ್ದಾರಿ-73ರಲ್ಲಿ ನಡೆದಿದೆ.

ಕಾರಿನಲ್ಲಿ 4 ಜನ ವಿದ್ಯಾರ್ಥಿಗಳುಅಪಾಯಕಾರಿಯಾಗಿ ಸ್ಟಂಟ್‌ ಮಾಡುತ್ತಿರುದನ್ನು ಸಾರ್ವಜನಿಕರು ವೀಡಿಯೋ ಸೆರೆ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಕಾರ್ಯಾಚರಣೆ ನಡೆಸಿ ಕಾರು ಮತ್ತು ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ 6,500 ರೂ. ದಂಡ ವಸೂಲಿ ಮಾಡಿ ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *