ಪುತ್ತೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನ ಪಡ್ನರ್ ಮುಂಡಾಜೆ ನಿವಾಸಿ ಗಿರಿಜಾ ದೇವಿ ಮತ್ತು ಮಂಟು ಪಾಸ್ವಾನ ದಂಪತಿಯ ಪುತ್ರಿ ರೂಪ (19) ನಾಪತ್ತೆಯಾದ ಯುವತಿ.

ಈಕೆಯ ತಾಯಿ ಮಂಗಳೂರಿನ ನರ್ಸಿಂಗ್ ಹೋಂ ನಲ್ಲಿ ಕೆಲಸ ಮಾಡುತ್ತಿದ್ದು, ತಂದೆ ಉಡುಪಿಯಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿದ್ದಾರೆ. ಮನೆಯಲ್ಲಿ ರೂಪ ಮತ್ತು ಆಕೆಯ ತಮ್ಮ ಇಬ್ಬರೇ ವಾಸವಿದ್ದು, ಜುಲೈ 2ರಂದು ರೂಪ ಜೆರಾಕ್ಸ್ ಮಾಡಿಸಲು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದಳು. ಆದರೆ ಆ ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಮನೆಗೂ ಹೋಗದೆ ಸಂಬಂಧಿಕರಲ್ಲಿಗೂ ಹೋಗದೆ, ಸ್ನೇಹಿತರ ಮನೆಗೆ ತೆರಳದೆ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


