Breaking
4 Feb 2026, Wed

ಭಾರತೀಯ ಜನತಾ ಪಾರ್ಟಿ ವತಿಯಿಂದ ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಹಿರೇಬಂಡಾಡಿ ಗ್ರಾಮಪಂಚಾಯತಿನ ಎದುರುಗಡೆ ಪ್ರತಿಭಟನೆ

ಪುತ್ತೂರು: ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಹಿರೇಬಂಡಾಡಿ ಗ್ರಾಮಪಂಚಾಯತಿನ ಎದುರುಗಡೆ ಪ್ರತಿಭಟನೆ ನಡೆಸಲಾಯಿತು.

ಈ ಕಾರ್ಯಕ್ರಮದ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು ಹಮ್ಮಬ್ಬ ಸವ್ಕತ್ ಅಲಿ ಇವರು ಮಾಡಿದರು, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ವಿದ್ಯಾಧರ್ ಜೈನ್ ಉಪಾಧ್ಯಕ್ಷರು ಬಿಜೆಪಿ ಗ್ರಾಮಾಂತರ ಮಂಡಲ ಪುತ್ತೂರು ಇವರು ರಾಜ್ಯ ಸರಕಾರದ ವೈಫಲ್ಯವನ್ನು ಖಂಡಿಸಿ ಆಕ್ರೋಶ ವ್ಯಕ್ತ ಪಡಿಸಿದರು.

ಧನ್ಯವಾದ ಸಮರ್ಪಣೆಯನ್ನು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಹೇಮಾವತಿ ಇವರು ಮಾಡಿದರು.ನಂತರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾನಂದ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಶಾಂಭವಿ,ಸಹಕಾರಿ ಸಂಘ ಉಪ್ಪಿನಂಗಡಿ ಇದರ ಉಪಾಧ್ಯಕ್ಷರಾದ ದಯಾನಂದ ಸರೋಳಿ, ಹಿರೇಬಂಡಾಡಿ ಗ್ರಾಮದ ಶಕ್ತಿ ಕೇಂದ್ರ ಅಧ್ಯಕ್ಷರಾದ ನಿತಿನ್ ತಾರಿತ್ತಾಡಿ, ಶ್ರೀಮತಿ ಹೇಮಾವತಿ, ಶ್ರೀ ನಾರಾಯಣ, ಶ್ರೀ ಹೇಮಂತ್ ಮೈಥಳಿಕೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ವಿಶ್ವನಾಥ ಕೆಮ್ಮಟೆ, ಹಾಗೂ ಬಿಜೆಪಿ ಕಾರ್ಯಕರ್ತರಾದ ನವೀನ್ ಕುಬಲ, ನೀಲಯ್ಯ ಸರೋಳಿ ಆದಿರಾಜ ಸಂತಿತಡ್ಡ, ಜನಾರ್ದನ ಕನ್ಯಾನ, ಚಂದ್ರಶೇಖರ ಕುಲಮಗೆರು, ಜನಾರ್ದನ ಅನತಿಮಾರು, ಧನಂಜಯ ಮೂಡಿಪು, ರವೀಂದ್ರ ರೈ ಮುರದಮೇಲು, ರಂಜಿತ್ ಕೆಮ್ಮರ ಗುತ್ತು, ಲಕ್ಷ್ಮೀಶ ನಿಡೆಂಕಿ ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದರು.

Leave a Reply

Your email address will not be published. Required fields are marked *