ಬಂಟ್ವಾಳ: ಬಂಟರ ಸಂಘ ಸಿದ್ಧಕಟ್ಟೆ ವಲಯ ಇದರ ಆಶ್ರಯದಲ್ಲಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ಎಲಿಯನಡುಗೋಡು ಗ್ರಾಮದ ಕೊನೆರಬೆಟ್ಟು ಗುತ್ತುವಿನ ಗದ್ದೆಯಲ್ಲಿ ಜೂನ್ 22 ಆದಿತ್ಯವಾರದಂದು ಅದ್ದೂರಿಯಿಂದ ನಡೆಯಿತು.
ಕಾರ್ಯಕ್ರಮವನ್ನು ಶ್ರೀಮತಿ ಮೀನಾಕ್ಷಿ ರಘುರಾಮ ಶೆಟ್ಟಿ ಕೊನೆರಬೆಟ್ಟು ಹಾಗೂ ಸಂಜೀವ ಶೆಟ್ಟಿ ಉಮ್ಮೆಟ್ಟು ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ಸಂದೇಶ್ ಶೆಟ್ಟಿ ಪೊಡುಂಬ , ಪ್ರಮುಖ ಅತಿಥಿಗಳಾಗಿ ಬಂಟ್ವಾಳ ತಾಲೂಕು ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಸುಮಾ ಎನ್ ಶೆಟ್ಟಿ, ತಾಲುಕು ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಸಂಘದ ನಿಯೋಜಿತ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ತಾಲ್ಲೂಕು ಕಾರ್ಯಕಾರಿ ಸಮಿತಿ ಸದಸ್ಯರಾದ ನವೀನ್ ಚಂದ್ರ ಶೆಟ್ಟಿ ಮುಂಡಾಜೆ ಗುತ್ತು, ಹಿರಿಯರಾದ ಸಂಜೀವ ಶೆಟ್ಟಿ ಉಮ್ಮೆಟ್ಟು ಹೊಸಮನೆ, ನಿತ್ಯಾನಂದ ಶೆಟ್ಟಿ ಬೊಗರಬೆಟ್ಟು, ಸುರೇಶ್ ಶೆಟ್ಟಿ ವಕೀಲರು, ಉಪಾಧ್ಯಕ್ಷರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಶ್ರೀಧರ ಶೆಟ್ಟಿ , ಮoದಾರತಿ ಶೆಟ್ಟಿ, ಅರುಣಾ ಸುರೇಶ್ ಶೆಟ್ಟಿ, ಕುಕ್ಕಿಪಾಡಿ ಪಂಚಾಯತ್ ಅಧ್ಯಕ್ಷರಾದ ಶೇಖರ್ ಶೆಟ್ಟಿ, ಪ್ರತಿಭಾ ಶೆಟ್ಟಿ ಬದ್ಯಾರು, ಅಶ್ವಿನಿ ಶೆಟ್ಟಿ,ಕಾರ್ಯದರ್ಶಿ ರತೀಶ್ ಶೆಟ್ಟಿ, ಸಂತೋಷ್ ಶೆಟ್ಟಿ ಕೊನೆರಬೆಟ್ಟು, ಬಾಬು ಶೆಟ್ಟಿ ಅಸಾಯಿ, ರಾಜೇಶ್ ಶೆಟ್ಟಿ ಸಿದ್ಧಕಟ್ಟೆ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ ಉಪಸ್ಥಿತರಿದ್ದರು.

ಯಶೋಧ ಶೆಟ್ಟಿ ಹಾಗೂ ಚಂದ್ರಕಲಾ ಶೆಟ್ಟಿ ಪ್ರಾರ್ಥನೆ ಸಲ್ಲಿಸಿದರು. ರತೀಶ್ ಶೆಟ್ಟಿ ಸ್ವಾಗತಿಸಿ, ತ್ತು ಗಣೇಶ್ ಶೆಟ್ಟಿ ನಿರೂಪಣೆ ನಿರ್ವಹಿಸಿದರು. ದೈಹಿಕ ಶಿಕ್ಷಕರಾದ ಸತೀಶ್ ಸ್ಪರ್ಧೆಗಳ ತೀರ್ಪುಗಾರರಾಗಿದ್ದರು.

ಕ್ರೀಡಾಕೂಟವನ್ನು ಲೋಕೇಶ್ ಶೆಟ್ಟಿ ಕುಳ ಮತ್ತು ಸಂಜೀವ ಶೆಟ್ಟಿ ಉಮ್ಮೆಟ್ಟು ಉದ್ಘಾಟಿಸಿದರು. ವಿವಿಧ ವಯೋಮಾನದ ಸುಮಾರು ೫೦೦ಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸಿದ್ದು ಈ ಕ್ರೀಡಾಕೂಟದಲ್ಲಿ ಎಲ್ ಕೆಜಿ ಯಿಂದ ವಯೋವೃದ್ಧರವರೆಗೆ ವೈಯಕ್ತಿಕ ಸ್ಪಡೆಗಳನ್ನು ಆಯೋಜಿಸಲಾಗಿತ್ತು ಹಾಗೂ ಗುಂಪು ವಿಭಾಗದಲ್ಲಿ ತ್ರೋಬಾಲ್, ವಾಲಿಬಾಲ್, ಹಗ್ಗಜಗ್ಗಾಟ, ಕೈಚೆಂಡು ಮುಂತಾದ ತಂಡ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ತಾಲ್ಲೂಕಿನ ವಿವಿಧ ಕ್ಷೇತ್ರದ ಗಣ್ಯರು ಜಗನ್ನಾಥ ಚೌಟ ಬದಿಗುಡ್ಡೆ, ಗಣೇಶ್ ಶೆಟ್ಟಿ ಗೋಳ್ತಮಜಲು, ಪದ್ಮನಾಭ ರೈ ಕಲ್ಲಡ್ಕ, ಗಂಗಾಧರ ಶೆಟ್ಟಿ ಕೋಡ್ಯೇಳು, ಯಶೋಧರ ಶೆಟ್ಟಿ ದಂಡೆ ಗೋಳಿ, ದುರ್ಗದಾಸ್ ಶೆಟ್ಟಿ ಮಾವಂತೂರು, ಶಶಿಧರ್ ಶೆಟ್ಟಿ ಕಲ್ಲಾಪು, ಸಂದೀಪ್ ಶೆಟ್ಟಿ ಕುಂಢಾಜೆ, ಸಂದೀಪ್ ಶೆಟ್ಟಿ ರಾಯಿ, ಭೋಜ ಶೆಟ್ಟಿ , ಸಂತೋಷ್ ಚೌಟ,ಉದಯ ಶೆಟ್ಟಿ ಪರನೀರು, ಸ್ಥಳದ ಮಾಲಕರಾದ ಅಕ್ಷತಾ ಶೆಟ್ಟಿ, ಆರತಿ ಶೆಟ್ಟಿ ಅರಳ,ಗೋಪಾಲ ಬಂಗೇರ ಉಳಿರೋಡಿ, ನಿತಿನ್ ವಗ್ಗ, ಆಗಮಿಸಿ ಶುಭಹಾರೈಸಿದರು.

ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿರುವ ‘ನೆತ್ತರಕೆರೆ’ ಸಿನಿಮಾದ ತಂಡದ ಆಗಮನ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿತು.ವೀಕ್ಷಕ ವಿವರಣೆಕಾರರಾಗಿ ಸುರೇಶ್ ಶೆಟ್ಟಿ ಸ್ವಾಗತ complex, ಸುರೇಶ್ ಶೆಟ್ಟಿ ವಕೀಲರು, ಗಣೇಶ್ ಶೆಟ್ಟಿ ಗೋಳಿದೊಟ್ಟು, ರಾಜೇಶ್ ಶೆಟ್ಟಿ ಕಾಂಬೋಡಿ ಭಾಗವಹಿಸಿದ್ದರು..
ತೀರ್ಪುಗಾರರಾಗಿ ಗುಣಶ್ರೀ ವಿದ್ಯಾಲಯ ದೈಹಿಕ ಶಿಕ್ಷಕರಾದ ಸತೀಶ್ ಕಾರ್ಯ ನಿರ್ವಹಿಸಿದರು..

