Breaking
21 Mar 2026, Sat

ಮಂಗಳೂರು: ಆನ್‌ಲೈನ್ ಟ್ರೇಡಿಂಗ್ ವಂಚನೆ – 49 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಮಂಗಳೂರು: ಆನ್‌ಲೈನ್ ಟ್ರೇಡಿಂಗ್ ಕುರಿತ ವಾಟ್ಸ್‌ಆ್ಯಪ್ ಸಂದೇಶವೊಂದನ್ನು ನಂಬಿ ವ್ಯಕ್ತಿಯೊವ೯ರು 49,12,000ರೂ. ಕಳೆದುಕೊಂಡಿದ್ದಾರೆ.

ಏ.24 ರಂದು “ಜಯ್ ವಿಕಾಸ್ ಕುಮಾರ್ ವರ್ಮ ಬುಕ್ ರಿಲೀಸ್ ಗ್ರೂಪ್” ಎಂಬ ವಾಟ್ಸ್‌ಆ್ಯಪ್ ಗುಂಪಿಗೆ ದೂರುದಾರರನ್ನು ಅವರ ಅನುಮತಿಯಿಲ್ಲದೆ ಸೇರಿಸಲಾಗಿತ್ತು. ಗುಂಪಿನಲ್ಲಿ ಟ್ರೇಡಿಂಗ್ ತರಬೇತಿ ನೀಡಿದವರ ಮಾತುಗಳನ್ನು ನಂಬಿ, ದೂರುದಾರರು “ಅಮನ್ಸಾ ಪಿಟಿಇ” ಎಂಬ ಅಪರಿಚಿತ ಆ್ಯಪ್ ಡೌನ್‌ಲೋಡ್ ಮಾಡಿ ಹಣ ಹೂಡಿಕೆ ಪ್ರಾರಂಭಿಸಿದರು.

ಪ್ರಾರಂಭದಲ್ಲಿ ಲಾಭ ದೊರೆತುದರಿಂದ ಬಳಿಕ ಮೇ 19ರಿಂದ ಜೂನ್ 9ರವರೆಗೆ ಹಂತ ಹಂತವಾಗಿ 45,03,525 ರೂ. ಹಣ ಪಾವತಿಸಿದರು.

ಬಳಿಕ ಹೂಡಿಕೆ ಮಾಡಿದ ಹಣವನ್ನು ತೆಗೆಯಲು ಹೋದಾಗ ಆಗದೇ ಇದ್ದು, ಈ ಬಗ್ಗೆ ವಿಚಾರಿಸಿದಾಗ ಟ್ಯಾಕ್ಸ್ ಕಟ್ಟುವಂತೆ ತಿಳಿಸಿದ್ದಾರೆ. ಅದರಂತೆ 4,08,525 ರೂ. ಹಣವನ್ನು ಕಟ್ಟಿದ್ದು, ಆ ಬಳಿಕವೂ ಹಣ ಹಿಂಪಡೆಯಲು ಆಗದೇ ಇದ್ದಾಗ ಮೋಸ ಹೋಗಿರುವುದು ತಿಳಿದುಬಂದಿದೆ.

ಈ ಸಂಬಂಧ ಸೆನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *