ಬೆಳ್ತಂಗಡಿ: ತೋಟವೊಂದಕ್ಕೆ ಬೃಹತ್ ಮರ ಬಿದ್ದು ಹಾನಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜದಲ್ಲಿ ಜೂ.13 ರಂದು ನಡೆದಿದೆ.
ಕಳೆಂಜ ನಿವಾಸಿಯಾಗಿರುವ ಪಾದೆ ಕೃಷ್ಣಪ್ಪ ಗೌಡರ ತೋಟಕ್ಕೆ ಮರ ಬಿದ್ದು ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಮರ ಬಿದ್ದ ಪರಿಣಾಮ ತೋಟದ ಒಳಗಡೆ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿದ್ದು ಘಟನಾ ಸ್ಥಳಕ್ಕೆ ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ತಂಡದ ಸದಸ್ಯರು ಧಾವಿಸಿ ತೆರವುಗೊಳಿಸಿದ್ದಾರೆ.
ಕಾರ್ಯಚರಣೆಯಲ್ಲಿ ತಂಡದ ಸದಸ್ಯರಾದ ಧನಂಜಯ ಗೌಡ ವಲಚ್ಚಿಲ್, ಯೋಗೀಶ್ ಸಿಂಬೂಲ್, ಹರೀಶ್ ವಳಗುಡ್ಡೆ, ಕಾರ್ತಿಕ್ ಎಂ. ಬಿ. ಹಾಗೂ ಸ್ಥಳೀಯರಾದ ಸಂಜೀವ ದೇವಾಡಿಗ, ಕೃಷ್ಣಪ್ಪ ಗೌಡ, ಪವರ್ ಮ್ಯಾನ್ ವಸಂತ್ ಪಾಲ್ಗೊಂಡಿದ್ದರು.

