Breaking
21 Sep 2026, Mon

ಬಸ್ ಮತ್ತು ಓಮಿನಿ ನಡುವೆ ಅಪಘಾತ: ಓಮಿನಿ ಚಾಲಕನಿಗೆ ಗಂಭೀರ ಗಾಯ

ಮೂಡುಬಿದಿರೆ: ಬಸ್ ಮತ್ತು ಓಮಿನಿ ಮಧ್ಯ ಅಪಘಾತ ನಡೆದ ಘಟನೆ ಮೂಡುಬಿದಿರೆಯ ನಾಗರಕಟ್ಟೆ ಅಪೋಲೊ ಮೆಡಿಕಲ್ ಬಳಿ ಜೂ.13ರಂದು ನಡೆದಿದೆ.

ತಾಲೂಕಿನ ಶಿರ್ತಾಡಿಯಿಂದ ಮೂಡುಬಿದಿರೆಗೆ ಬಸ್ ಸ್ಟಾಂಡ್ ಗೆ ಬರುತ್ತಿದ್ದ ಜೀವನ್ ಹೆಸರಿನ ಬಸ್ ಹಾಗೂ ಎದುರುಗಡೆಯಿಂದ ಬಂದ ಓಮಿನಿ ಕಾರಿಗೆ ಪರಸ್ಪರ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಡಿಕ್ಕಿಯ ಪರಿಣಾಮ ಓಮಿನಿ ಕಾರಿನ ಮುಂದಿನ ಭಾಗ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಗಂಭೀರ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *