Breaking
20 Jun 2026, Sat

ಕಡಬದಲ್ಲಿ ಅಮಲು ಪದಾರ್ಥ ತಂದುಕೊಡಲಿಲ್ಲ ಎಂದು ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ

ಕಡಬ: ಅಮಲು ಪದಾರ್ಥ ತಂದುಕೊಡಲಿಲ್ಲ ಎಂದು ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ನಡೆದಿದೆ.

ಕಾಪಿನಬಾಗಿಲು ನಿವಾಸಿಯಾಗಿರುವ ಶ್ರೀನಿವಾಸ ಆಚಾರ್ಯ(70) ಎಂಬವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.

ಮೃತ ಶ್ರೀನಿವಾಸ ಆಚಾರ್ಯ ಅವರು ಅಮಲು ತಂದುಕೊಡುವಂತೆ ಕೇಳಿದ್ದು,ತಂದು ಕೊಟ್ಟಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಬಾವಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅಮಲು ಪದಾರ್ಥ ಸೇವಿಸುವ ದೀರ್ಘಕಾಲದ ಚಟ ಹೊಂದಿದ್ದ ಶ್ರೀನಿವಾಸ ಆಚಾರ್ಯ ಅವರು ಜೂ.12 ರಂದು ಸಂಜೆ 6 ಗಂಟೆಗೆ ಮನೆಯಿಂದ ಹೊರನಡೆದ ಅವರು, ರಾತ್ರಿಯಾದರೂ ಮನೆಗೆ ಮರಳದೆ ಕಾಣೆಯಾಗಿದ್ದರು.

ಅವರಿಗಾಗಿ ಹುಡುಕಾಟ ಆರಂಭಿಸಿದ ಕುಟುಂಬಸ್ಥರು ಮನೆಯ ಸಮೀಪದ ಆವರಣವಿಲ್ಲದ ಬಾವಿಯ ಬಳಿ ತೆರಳಿದಾಗ ಅಲ್ಲಿ ಅವರ ಕನ್ನಡಕ ಹಾಗೂ ಬೈರಸ್ ಪತ್ತೆಯಾಗಿದೆ.

ಬಾವಿಯೊಳಗೆ ಟಾರ್ಚ್ಲೈಟ್ ಹಾಕಿ ಪರಿಶೀಲಿಸಿದರೂ ಅದೇ ರಾತ್ರಿ ಯಾವ ಮಾಹಿತಿಯೂ ಲಭಿಸಿರಲಿಲ್ಲ.

ಜೂ.13ರ ಬೆಳಿಗ್ಗೆ ಪುನಃ ಪರಿಶೀಲನೆ ನಡೆಸಿದಾಗ ಬಾವಿಯೊಳಗೆ ಶ್ರೀನಿವಾಸ ಆಚಾರ್ಯ ಅವರ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *