Breaking
22 Mar 2026, Sun

ದೇರಾಜೆಯಲ್ಲಿ ಜೀಪಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ತಲವಾರು ಬೀಸಿ ಹಲ್ಲೆಗೆ ಯತ್ನ

ಬಂಟ್ವಾಳ: ಜೀಪಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ತಲವಾರು ಬೀಸಿ ಹಲ್ಲೆಗೆ ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಜೂ.11ರಂದು ನಡೆದಿದೆ.

ಸಜಿಪಮುನ್ನೂರು ಗ್ರಾಮದ ನಿವಾಸಿ ಉಮರ್ ಫಾರೂಕ್ (48) ಎಂಬವರ ಮೇಲೆ ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಉಮರ್ ಫಾರೂಕ್ ಅವರು ಶುಕ್ರವಾರ ದೂರು ನೀಡಿದ್ದು ಮನೆಯಿಂದ ಜೀಪಿನಲ್ಲಿ ದೇರಳಕಟ್ಟೆ ಕಡೆಗೆ ತೆರಳುತ್ತಿದ್ದ ವೇಳೆ ಸಜಿಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ, ರಸ್ತೆಯ ವಿರುದ್ದ ದಿಕ್ಕಿನಿಂದ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದು ಬೈಕಿನ ಹಿಂಬದಿ ಸವಾರನಾಗಿದ್ದ ವ್ಯಕ್ತಿಯು ತಲವಾರು ಬೀಸಿರುತ್ತಾನೆ. ಈ ವೇಳೆ ತಲವಾರು ತಾಗಿ ಜೀಪಿನ ಸೈಡ್ ಮಿರರ್ ನ ಗಾಜು ಒಡೆದಿದೆ ಎಂದು ಆರೋಪಿಸಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *