Breaking
22 Mar 2026, Sun

ಮಂಗಳೂರಿನಲ್ಲಿ ಚೂರಿ ಇರಿತಕ್ಕೆ ಒಳಗಾದ ಯುವಕ ಸಾವು

ಮಂಗಳೂರು: ನಗರದ ಯೆಯ್ಯಾಡಿಯಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಯುವಕ ಶುಕ್ರವಾರ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಕೌಶಿಕ್ ಎಂಬಾತ ಮೃತ ಯುವಕನಾಗಿದ್ದಾನೆ.

ಇದನ್ನು ಪ್ರತೀಕಾರದ ದಾಳಿ ಅಂತ ಹೇಳಲಾಗುತ್ತಿದೆ. ಬಿಜೈನ ಬ್ರಿಜೇಶ್ ಶೆಟ್ಟಿ ಮತ್ತು ಗಣೇಶ್ ಎಂಬವರು ಕೌಶಿಕ್ ನ ಹೊಟ್ಟೆಗೆ ಚೂರಿ ಇರಿದು ಹಲ್ಲೆ ಮಾಡಿದ್ದರು ಎನ್ನಲಾಗಿದೆ.

ಹಲ್ಲೆಯ ನಂತರ ಕೌಶಿಕ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪೊಲೀಸರು ತನಿಖೆ ಮುಂದುವರೆಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

ಜೂ. 6 ರಂದು ಮಂಗಳೂರು ನಗರದ ಯೆಯ್ಯಾಡಿಯಲ್ಲಿ ಈ ಚೂರಿ ಇರಿತ ಪ್ರಕರಣ ನಡೆದಿತ್ತು.

Leave a Reply

Your email address will not be published. Required fields are marked *