Breaking
23 Sep 2026, Wed

ಕಡಬದಲ್ಲಿ ಯಕ್ಷಗಾನ ಪ್ರದರ್ಶನದ ವೇಳೆ ವೇದಿಕೆಗೆ ನುಗ್ಗಿ ಅರ್ಥಧಾರಿಯ ಮೈಮೇಲೆ ಎರಗಿದ ವ್ಯಕ್ತಿ

ಕಡಬ: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಏಕಾಏಕಿ ಸಭೆಯಲ್ಲಿದ್ದ ವ್ಯಕ್ತಿಯೋರ್ವರು ವೇದಿಕೆಗೆ ನುಗ್ಗಿ ಅರ್ಥಧಾರಿಯ ಮೈಮೇಲೆ ಎರಗಿದ ಘಟನೆ ಕಡಬ ತಾಲೂಕಿನ ನಂದುಗುರಿ ಎಂಬಲ್ಲಿ ನಡೆದಿದೆ.

ಕಳೆದ ಮೂರು ದಿನಗಳ ಹಿಂದೆ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಎಂಬವರ ಮನೆಯಲ್ಲಿ ಸೇವಾರ್ಥವಾಗಿ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು.ಈ ಪ್ರಸಂಗದಲ್ಲಿ ವಿದ್ಯುನ್ಮಾಲಿ ಹಾಗೂ ಧಿತಿ ಸಂಭಾಷಣೆ ನಡೆಯುತ್ತಿದ್ದ ವೇಳೆ ಇಲ್ಲಿನ ಸ್ಥಳೀಯರಾದ ರಾಧಾಕೃಷ್ಣ ಎಂಬವರು ಸಭೆಯಿಂದ ಏಕಾಏಕಿ ಓಡೋಡಿ ಬಂದು ಅರ್ಥಧಾರಿಯ ಮೇಲೆ ಎರಗಿದ್ದಾರೆ.

ಇವರ ಈ ವರ್ತನೆಯಿಂದ ಕ್ಷಣ ಕಾಲ ಕಲಾವಿದರು, ಪ್ರೇಕ್ಷಕರು ದಿಗ್ಬ್ರಮೆಗೊಳಗಾಗಿ ಗಲಿಬಿಲಿಗೊಂಡಿದ್ದಾರೆ.

ಕೂಡಲೇ ಅವರನ್ನು ತಡೆದು ಇತರರ ಸಹಕಾರದಿಂದ ಎಳೆದುಕೊಂಡು ದೂರ ಹೋಗಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *