Breaking
27 Jul 2025, Sun

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೆಶ್ವರ ಭಜನಾ ಪರಿಷತ್ ಪುಂಜಾಲಕಟ್ಟೆ ವಲಯದ ವತಿಯಿಂದ ಉಳಿ ಯುವಕ ಮಂಡಲ ದಲ್ಲಿ ಭಜನಾ ತರಬೇತಿ ಶಿಬಿರ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೆಶ್ವರ ಭಜನಾ ಪರಿಷತ್ ಪುಂಜಾಲಕಟ್ಟೆ ವಲಯದ ವತಿಯಿಂದ ಒಂದು ವಾರದ ಭಜನಾ ತರಬೇತಿ ಶಿಬಿರ ಉಳಿ ಯುವಕ ಮಂಡಲ ಸಹಯೋಗದಲ್ಲಿ ಉಳಿ ಯುವಕ ಮಂಡಲ ದಲ್ಲಿ ಉದ್ಘಾಟನೆ ನಡೆಸಲಾಯಿತು.

ಯುವಕ ಮಂಡಲ ಅಧ್ಯಕ್ಷರ ವಸಂತ್ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.

ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಭಜನೆ ಪರಿಷತ್ ಅಧ್ಯಕ್ಷರ ಮುರಳಿ ಪೊಳಲಿ ,ಉಪಾಧ್ಯಕ್ಷರು ರೋಹಿನಾಥ್ ಗೌಡ, ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ, ಕೇಂದ್ರ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಕಕ್ಯ ನಿವೃತ್ತ ಮುಖ್ಯ ಶಿಕ್ಷಕ ಮುತ್ತಪ್ಪ ಗೌಡ ಉಳಿ ಒಕ್ಕೂಟ ದ ಅಧ್ಯಕ್ಷರ ವಿಶ್ವನಾಥ್,ಭಜನಾ ಪರಿಷತ್ ಜಿಲ್ಲಾ ಸಮನ್ವಯ ಧಿಕಾರಿ ಸಂತೋಷ್, ಭಜನಾ ತರಬೇತಿ ಶಿಕ್ಷಕ ಆಕಾಶ್ ಮೊದಲದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಲಯದ ಭಜನಾ ಪರಿಷತ್ ಪದಾಧಿಕಾರಿಗಳಾದ ವಿಜಯ್ ಕುಮಾರ್ ದುಗ್ಗಪ್ಪ ಮೂಲ್ಯ,ಒಕ್ಕೂಟದ ಪದಾಧಿಕಾರಿಗಳು ಸೇವಾಪ್ರತಿನಿಧಿಗಳಾದ ಉಷಾ ಸುಶ್ಮಿತಾ ಉಪಸ್ಥಿತರಿದ್ದರು
ಪುಟಾಣಿ ದೀಪಾ ಮತ್ತು ಶ್ರಾವ್ಯ ಪ್ರಾರ್ಥಿಸಿ, .ಸೇವಾಪ್ರತಿನಿಧಿ ಶೇಖರ್ ಸ್ವಾಗತಿಸಿ, ಶ್ರೀಮತಿ ಸುಧಾ ರೈ ವಂದಿಸಿದರು . ವಲಯ ಮೇಲ್ವಿಚಾರಕಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *