ಪುತ್ತೂರು: ಬೆಲೆ ಬಾಳುವ ತಾಮ್ರದ ಗಂಟೆ ಕಳವು ಪ್ರಕರಣ; ಆರೋಪಿಯ ಬಂಧನ

ಪುತ್ತೂರು: ಬೆಲೆ ಬಾಳುವ ತಾಮ್ರದ ಗಂಟೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪುತ್ತೂರು, ಕಬಕ ನಿವಾಸಿ ಸಂಶುದ್ದೀನ್ ಯಾನೆ ಸಂಶು (50) ಎಂದು ಗುರುತಿಸಲಾಗಿದೆ.

ಆರೋಪಿ ಬಗ್ಗೆ ಜು. 26ರಂದು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 10 ಕೆಜಿ ತೂಕದ ಸುಮಾರು 8,000 ರೂಪಾಯಿ ಬೆಲೆ ಬಾಳುವ ತಾಮ್ರದ ಗಂಟೆ ಕಳವು ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತನು ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲೂ ನಡೆದ ಇನ್ನೊಂದು ಪ್ರಕರಣವೊಂದರಲ್ಲೂ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *